ಹೆಬ್ರಿ : ಅಖಿಲ ಭಾರತ ಮಾಧ್ವ ಮಹಾಮಂಡಲ 30ನೇ ತತ್ವಜ್ಞಾನ ಸಮ್ಮೇಳನದ ಪೂರ್ವಭಾವಿಯಾಗಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಸಂಕಲ್ಪದಂತೆ ಎ. 1ರಂದು ವಿಪ್ರ ಬಾಂಧವರು ಧಾರ್ಮಿಕ ಕೇಂದ್ರಗಳ ಭೇಟಿ ನೀಡಿದರು. ಅಜೆಕಾರು ಗುಡ್ಡೆಯಂಗಡಿ ವಿದ್ವಾನ್ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ 35 ಮಂದಿ ವಿಪ್ರ ಬಾಂಧವರು ವಿಷ್ಣುಸಹಸ್ರನಾಮ ಪಾರಾಯಣ, ಶ್ರೀ ರಾಮ ತಾರಕ ಮಂತ್ರ ಸಹಿತ ದೇವರ ಸ್ತುತಿ, ಸಂಕೀರ್ತನೆ, ಭಜನೆಯೊಂದಿಗೆ ಉಡುಪಿ ಜಿಲ್ಲೆಯ ಆಯ್ದ 23 ಪುರಾತನ ದೇವಾಲಯಗಳಿಗೆ ಭೇಟಿ ನೀಡಿದರು.
ಕಾಡುಹೊಳೆ ಜಂಗಮೇಶ್ವರ ಮಠ, ಎಳ್ಳಾರೆ ಜನಾರ್ದನ ದೇವಸ್ಥಾನ, ಶಿರೂರು ಮಠ, ಮಾರ್ಣೈ ಮುಖ್ಯಪ್ರಾಣ ಮಠ, ಪೆರಂಣಕಿಲ ದೇವಸ್ಥಾನ, ಪಾಜಕ ಕ್ಷೇತ್ರ, ಪರಶುರಾಮ ಕ್ಷೇತ್ರ, ಕುಂಜಾರುಗಿರಿ ದೇವಸ್ಥಾನ, ಮುಚ್ಚಿಲಕೋಡು ಸುಬ್ರಹ್ಮಣ್ಯ ದೇವಸ್ಥಾನ, ಅಲೆವೂರು ವಿಷ್ಣುಮೂರ್ತಿ ದೇವಸ್ಥಾನ, ಕೊಡಂಗಳ ಪುಳಿಂದ ವಿಷ್ಣುಮೂರ್ತಿ ದೇವಸ್ಥಾನ, ಉಡುಪಿ ಕೃಷ್ಣ ಮಠ, ಅನಂತೇಶ್ವರ, ಚಂದ್ರಮೌಳೀಶ್ವರ, ಶಂಬುಶೈಲೇಶ್ವರ ದೇವಸ್ಥಾನ, ಶಂಬುಕಲ್ಲು, ಉದ್ಯಾವರ ಗಣಪತಿ ದೇವಸ್ಥಾನ, ಮಾಂಗೋಡು ದೇವಸ್ಥಾನ, ಮಾಂಗೋಡು ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ಕಂಗೂರು ಮಠ, ಅರಿತೋಡು ದೇವಸ್ಥಾನ, ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನ, ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನ, ಬೆಳ್ಳಗುಂಡಿ ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದರು.
ತತ್ವಜ್ಞಾನ ಸಮ್ಮೇಳನ : ವಿಪ್ರ ಬಾಂಧವರಿಂದ ಪುರಾತನ ಧಾರ್ಮಿಕ ಕ್ಷೇತ್ರಗಳ ಭೇಟಿ






























































