ವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿಯ ಕೊಡುಗೆ ಶ್ರೇಷ್ಠವಾದುದು – ವಿಜಯ ಶೆಟ್ಟಿ

ಕಾರ್ಕಳ : ಜೀವನವನ್ನು ಸಹಜವಾಗಿ ಆಸ್ವಾಧಿಸುವುದನ್ನು ಕಲಿಸುವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವ ಕಲೆ ನಾಟಕಗಳ ಮೂಲಕ ವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿ ನೀಡಿದ ಕೊಡುಗೆ ಶ್ರೇಷ್ಠವಾದುದು ಎಂದು ಕಾರ್ಕಳ ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಯಕ್ಷ ರಂಗಾಯಣ ಕಾರ್ಕಳ ಹಾಗೂ ರಂಗ ಸಂಸ್ಕೃತಿ ಕಾರ್ಕಳ ಇದರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಮಂಜುನಾಥ ಪೈ ಸಭಾಂಗಣದಲ್ಲಿ ಮಾ. 20ರಿಂದ 25ರವರೆಗೆ ನಡೆದ ಹನ್ನೊಂದನೇ ವರ್ಷದ ಬಿ. ಗಣಪತಿ ಪೈ ರಂಗೋತ್ಸವ ‘ಮಾಗಿ-ಸುಗ್ಗಿʼ ನಾಟಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರಂಗ ಸಂಸ್ಕೃತಿಯ ಅಧ್ಯಕ್ಷ ನಿತ್ಯಾನಂದ ಪೈ ಮಾತನಾಡುತ್ತಾ ನಾಟಕೋತ್ಸವಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಪ್ರತಿದಿನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಗಾಯಕರಾದ ಶಿವಕುಮಾರ್, ರಮ್ಯ ಸುಧೀಂದ್ರ ಹಾಗೂ ಭೂಮಿಕಾ ಹಾರಾಡಿ ಮತ್ತು ನಾಟಕ ತಂಡದ ನಿರ್ದೇಶಕ ರಾಮ್ ಶೆಟ್ಟಿಯವರನ್ನು ಗೌರವಿಸಲಾಯಿತು

ವೇದಿಕೆಯಲ್ಲಿ ರಂಗ ಸಂಸ್ಕೃತಿಯ ಸ್ಥಾಪಕ ಕಾರ್ಯದರ್ಶಿ ಜಯಪ್ರಕಾಶ್ ಮಾವಿನಕುಳಿ, ನಾಟಕೋತ್ಸವದ ಸಂಚಾಲಕ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ರಂಗ ನಿರ್ದೇಶಕ ಚಂದ್ರನಾಥ ಬಜಗೋಳಿ ಉಪಸ್ಥಿತರಿದ್ದರು. ನಾಟಕೋತ್ಸವದ ಸಹಸಂಚಾಲಕ ನಾಗೇಶ್ ನಲ್ಲೂರು ಸ್ವಾಗತಿಸಿ, ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ವಸಂತ ಎಂ. ವಂದಿಸಿದರು.





























































































































error: Content is protected !!
Scroll to Top