ಕುಂಭಮೇಳದಲ್ಲಿ 30 ಕೋಟಿ ಆದಾಯ ಗಳಿಸಿದ್ದ ಅಂಬಿಗನಿಗೆ ಇದೀಗ ತೆರಿಗೆ ಶಾಕ್‌

ದೆಹಲಿ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ನೈನಿ ತಾಲೂಕಿನ ನಾವಿಕ ಪಿಂಟು ಮಲ್ಲಾಹ್‌ ಬರೀ 45 ದಿನಗಳ ಕುಂಭಮೇಳದಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಆದಾಯ ಗಳಿಸಿರುವ ಸುದ್ದಿ ವೈರಲ್‌ ಆಗಿತ್ತು. ಈ ಬಗ್ಗೆ ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿಧಾನಸಭೆಯಲ್ಲಿ ಮಾತನಾಡಿದ್ದರು. ಆದರೆ ಈ ಯಶಸ್ಸಿನ ಕಥೆಯ ಹಿನ್ನಲೆಯಲ್ಲಿಯೇ ಅವರಿಗೆ ತೆರಿಗೆ ಸಂಕಷ್ಟ ಕೂಡ ಶುರುವಾಗಿದೆ.

ವಿಧಾನಸಭೆಯಲ್ಲಿ ಮಾತನಾಡಿದ್ದ ಯೋಗಿ ಅದಿತ್ಯನಾಥ್‌, ಪಿಂಟು ಅವರ ಕುಟುಂಬ 130 ಬೋಟ್‌ಗಳನ್ನು ಹೊಂದಿದ್ದು, 45 ದಿನದಲ್ಲಿ 30 ಕೋಟಿ ಆದಾಯ ಮಾಡಿದೆ. ಪ್ರತಿಬೋಟ್‌ನಿಂದ 23 ಲಕ್ಷ ಆದಾಯವಾಗಿದ್ದು, ಪ್ರತಿ ದಿನ ಅವರು 50-52 ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ ಎಂದು ತಿಳಿಸಿದ್ದರು. ಯೋಗಿ ಆದಿತ್ಯನಾಥ್‌ ಈತನ ಕಥೆಯನ್ನು ವಿಧಾನಸಭೆಯಲ್ಲಿ ಹೇಳಿದ ಬಳಿಕ ಉದ್ಯಮಿಗಳು ಸೇರಿದಂತೆ ಹಲವರು ಆದಾಯ ತೆರಿಗೆ ಇಲಾಖೆಗೆ ಟ್ಯಾಗ್‌ ಮಾಡಿ, ಇವರಿಂದ ತೆರಿಗೆ ಪಡೆಯುತ್ತೀರಿ ಎಂದು ಭಾವಿಸುತ್ತೇವೆ ಎಂದಿದ್ದರು.

30 ಕೋಟಿ ರೂ. ಆದಾಯಕ್ಕೆ ನಾವಿಕ 12.80 ಕೋಟಿ ರೂ. ತೆರಿಗೆ ಕಟ್ಟಬೇಕಾಗಿದೆ. ತೆರಿಗೆ ಅಧಿಕಾರಿಗಳು ತಮ್ಮ ಪಾಲನ್ನು ಕೇಳುತ್ತಿರುವುದರಿಂದ ಅವರ ಅನಿರೀಕ್ಷಿತ ಸಂಪತ್ತು ಆರ್ಥಿಕ ಸವಾಲಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಧ್ಯಸ್ಥಿಕೆಗೆ ಈಗ ಅನೇಕರು ಮನವಿ ಮಾಡಿದ್ದಾರೆ.









































































































error: Content is protected !!
Scroll to Top