ಕಾರ್ಕಳ : ಮಾಳದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಫೆ.28ರಂದು ಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಲಾಯಿತು.
ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಗವರ್ನರ್ ರೊಟೇರಿಯನ್ ಸಿಎ ದೇವಾನಂದ್ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಸಹಾಯಕ ಗವರ್ನರ್ ರೊಟೇರಿಯನ್ ಅನಿಲ್ ಡೇಸಾ, ವಲಯ ಸೇನಾನಿ ರೊಟೇರಿಯನ್ ಸುರೇಶ್ ನಾಯಕ್, ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮದ್, ಕಾರ್ಯದರ್ಶಿ ಗಣೇಶ್ ಸಾಲಿಯಾನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಗಜಾನನ ಮರಾಠೆ ರೋಟರಿ ಕ್ಲಬ್ ಚಟುವಟಿಕೆಗಳನ್ನು ಶ್ಲಾಘಿಸಿದರು ಹಾಗೂ ಗ್ರಾಮೀಣ ಶಾಲೆಗಳಿಗೆ ರೋಟರಿ ಕ್ಲಬ್ ಕಾರ್ಕಳ ನೀಡುತ್ತಿರುವ ದೇಣಿಗೆಗಳಿಗಾಗಿ ಸದಸ್ಯರನ್ನು ಅಭಿನಂದಿಸಿದರು.
ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಪೂರ್ಣಿಮಾ ಶೆಣೈ ಸ್ವಾಗತಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಕಳ ರೋಟರಿ ಕ್ಲಬ್‌ನಿಂದ ಮಾಳ ಗುರುಕುಲ ಶಾಲೆಗೆ ನೀರಿನ ಘಟಕ ಕೊಡುಗೆ






























































