ಕಾಂಗ್ರೆಸ್‌ ಕುಟುಂಬೋತ್ಸವದಲ್ಲಿ ದಿ. ಗೋಪಾಲ್ ಭಂಡಾರಿ ಅವರಿಗೆ ಅವಮಾನ – ಸುರೇಶ್ ಶೆಟ್ಟಿ ಶಿವಪುರ

ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾ. 2ರಂದು ನಡೆದ ಕುಟುಂಬೋತ್ಸವ ಸಮಾವೇಶದ ವೇದಿಕೆಯಲ್ಲಿ ಹಾಗೂ ಕಾರ್ಯಕ್ರಮದ ಪ್ರಚಾರ ಫಲಕಗಳಲ್ಲಿ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ್ ಭಂಡಾರಿಯವರ ಫೋಟೋ ಅಳವಡಿಸದೇ ಕಾರ್ಕಳ ಕಾಂಗ್ರೆಸ್ ಭಂಡಾರಿ ಅವರಿಗೆ ಅವಮಾನ ಮಾಡಿದೆ ಎಂದು ಬಿಜೆಪಿ ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂಬಾಲಕರಿಗೆ ಮಾತ್ರ ಪ್ರಾಶಸ್ತ್ಯ
ಒಂದು ಸಂದರ್ಭದಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ ಗೋಪಾಲ್ ಭಂಡಾರಿ ಅವರಿಗೆ ಜೀವಂತ ಇರುವಾಗಲೇ ಅವಮಾನಿಸಿದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತವರ ತಂಡ ಮಾನ್ಯ ಭಂಡಾರಿಯವರು ಗತಿಸಿದ ನಂತರವು ಅವಮಾನ ಮಾಡುತ್ತಿದೆ. ಇಂತಹ ನಡವಳಿಕೆ ಕಾರ್ಕಳ ಕಾಂಗ್ರೆಸ್ ನಾಯಕರ ಮನೋ ಸ್ಥಿತಿಯನ್ನು ತೋರಿಸುತ್ತಿದೆ. ದಿ. ಗೋಪಾಲ್ ಭಂಡಾರಿಯವರು ತನ್ನ ಕಾಲಾವಧಿಯಲ್ಲಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಪಕ್ಷ ಕಟ್ಟಿದ್ದಾರೆ. ಆದರೆ, ಈಗಿನ ನಾಯಕರುಗಳು ತಮ್ಮ ತಮ್ಮ ಹಿಂಬಾಲಕರಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಏನೇ ಇರಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಅವಮಾನ ಮಾಡಿರುವುದು ಬೇಸರದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಿಕೆಶಿ ಬಣಕ್ಕೆ ವಾಲಿದರೆ ?
ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿಯವರು ಡಿಕೆ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಆಗುತ್ತೀರಿ ಎಂದಾಗ ವೇದಿಕೆಯಲ್ಲಿದ್ದ ಕಾರ್ಕಳ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಉದಯ ಕುಮಾರ್ ಶೆಟ್ಟಿಯವರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ನೋಡಿದರೆ ಇವರು ಸಿದ್ದರಾಮಯ್ಯನವರ ಬಣದಿಂದ ಈಗ ಡಿಕೆಶಿ ಬಣಕ್ಕೆ ವಾಲಿದರೆ ? ಎಂಬ ಅನುಮಾನ ಮೂಡುತ್ತಿದೆ. ಡಿ.ಕೆ.ಶಿ. ಯವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದಕ್ಕೆ ಕಾರ್ಕಳದಲ್ಲಿ ಇಂತಹ ಸಮಾವೇಶ ಹಮ್ಮಿಕೊಂಡರೆ ? ಎಂಬ ಸಂದೇಹವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಎಂದು ಸುರೇಶ್‌ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top