ಕಾರ್ಕಳ : ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಶವವಾಗಿ ಪತ್ತೆಯಾದ ಘಟನೆ ನೂರಲ್ಬೆಟ್ಟಿನಲ್ಲಿ ಸಂಭವಿಸಿದೆ. ಗಾಂದೊಟ್ಟು ಹೊಸಮನೆ ನಿವಾಸಿ ಸುಜಯ ದೇವಾಡಿಗ (36) ಎಂಬವರು ಫೆ. 18ರಂದು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದರು. ಈ ಬಗ್ಗೆ ಫೆ.20ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಫೆ. 21ರಂದು ಮನೆಯಿಂದ 1½ ಕೀ ಮೀ ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸುಜಯ ಅವರು ಅವಿವಾಹಿತರಾಗಿದ್ದು, ವಿಪರೀತ ಮದ್ಯಸೇವನೆಯ ಚಟ ಹೊಂದಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಮರಕ್ಕೆ ಹತ್ತಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಳಗೆ ಬಿದ್ದ ಸ್ಥಳದಲ್ಲಿ ಕಲ್ಲುಗಳಿದ್ದರಿಂದ ದೇಹದ ಭಾಗಗಳಿಗೆ ಗಾಯಗಳಾಗಿರುತ್ತದೆ. ಈ ಬಗ್ಗೆ ಅವರ ಅಣ್ಣ ಉದಯ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ






























































