ಅಜೆಕಾರಿನಲ್ಲಿ ಎಂ.ಪಿ.ಎಂ. ಕಾಲೇಜು ಎನ್‌.ಎಸ್‌.ಎಸ್‌. ಶಿಬಿರ ಉದ್ಘಾಟನೆ

ಕಾರ್ಕಳ : ಎನ್‌.ಎಸ್‌.ಎಸ್‌. ಶಿಬಿರದಿಂದಾಗಿ ಸಹಕಾರ ಸಹಬಾಳ್ವೆಯನ್ನೊಳಗೊಂಡಂತೆ ಮಾನವೀಯ ಸಂಬಂಧಗಳು ಮತ್ತು ಸಾಮಾಜಿಕ ಕಳಕಳಿ ವಿದ್ಯಾರ್ಥಿಗಳಲ್ಲಿ ವರ್ಧಿಸಬಲ್ಲದು. ಶಿಬಿರದಲ್ಲಿ ಕಂಡುಕೊಂಡತಹ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದಾಗ ಮಾತ್ರ ಎನ್ನೆಸ್ಸೆಸ್ ನಿಜವಾದ ದ್ಯೇಯೋದ್ದೇಶ ಈಡೇರಬಹುದು ಎಂದು ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ಎಂ. ಅಭಿಪ್ರಾಯಪಟ್ಟರು.
ಅವರು ಅಜೆಕಾರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಸುರೇಶ್ ರೈ. ಕೆ. ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಸಾಕಾಗುವುದಿಲ್ಲ. ಶೈಕ್ಷಣಿಕ ಪ್ರಬುದ್ಧತೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬೆಳಿಸಿಕೊಳ್ಳುವುದೂ ಮುಖ್ಯ. ಈ ನಿಟ್ಟಿನಲ್ಲಿ ಎನ್‌.ಎಸ್.‌ಎಸ್.‌ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಯೋಚಿಸುವಂತೆ ಮತ್ತು ಶಿಸ್ತು, ಸಹಬಾಳ್ವೆ ಹಾಗೂ ಸಹಕಾರಗಳಂತಹ ಅಭೂತಪೂರ್ವ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ ಎಂದರು.

ತಾ. ಪಂ. ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ಮರ್ಣೆ ಗ್ರಾ. ಪಂ. ಸದಸ್ಯ ಜಾನ್ ಟೆಲ್ಲಿಸ್, ಯಕ್ಷಕಲಾರಂಗ ಕಾರ್ಕಳದ ಕಾರ್ಯದರ್ಶಿ ಯಕ್ಷಗುರು ಮಹಾವೀರ ಪಾಂಡಿ, ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯಕ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ ಪೂಜಾರಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾ ಸೌಮ್ಯ ಹೆಚ್. ಕೆ. ಸ್ವಾಗತಿಸಿದರು. ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾದ್ಯಾಪಕ ಸುಬ್ರಹ್ಮಣ್ಯ ಕೆ. ಸಿ. ಶಿಬಿರದ ಕುರಿತಾಗಿ ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ವಿಲಾಸಿನಿ ಕಾರ್ಯಕ್ರಮ ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಸನ್ನ ಕುಮಾರ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಉತ್ಸವ್, ಸುಮಂತ್ ಹಾಗೂ ವಿಖ್ಯಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಜಯಲಕ್ಷ್ಮೀ, ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಭಂಡಾರಿ ಎಸ್. ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.











































































error: Content is protected !!
Scroll to Top