ಫೆ. 11 – 13 : ಬೈಲಡ್ಕ ಆನೆಕಲ್ಲು ಬ್ರಹ್ಮ ಬೈದರ್ಕಳ ಗರಡಿ ಜಾತ್ರೆ

ಕಾರ್ಕಳ : ಆನೆಕೆರೆ ಬೈಲಡ್ಕ ಆನೆಕಲ್ಲು ಬ್ರಹ್ಮ ಬೈದರ್ಕಳ ಗರಡಿ ಜಾತ್ರೆ ಫೆ. 11ರಿಂದ 13ರವರೆಗೆ ಜರುಗಲಿದೆ.
ಫೆ. 11ರಂದು ಬೆಳಗ್ಗೆ 8 ಗಂಟೆಗೆ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ, 8.30ಕ್ಕೆ ಗಣಹೋಮ, ಬೈದ್ಯೆರುಗಳಿಗೆ ಪನಿಯಾರ ಸೇವೆ, 9 ಗಂಟೆಗೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ತನು ತಂಬಿಲ ಸೇವೆ, 12.15ಕ್ಕೆ ಬೈದ್ಯೆರುಗಳ ದರ್ಶನ ಸೇವೆಯಾಗಿ ಧ್ವಜಾರೋಹಣ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, 7.30ಕ್ಕೆ ಶ್ರೀ ಧರ್ಮರಸು ನೇಮೋತ್ಸವ, 8.30ಕ್ಕೆ ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ನೇಮ ನಡೆಯಲಿದೆ.

ಫೆ. 12ರಂದು ಮಧ್ಯಾಹ್ನ 12 ಗಂಟೆಗೆ ಬ್ರಹ್ಮ ಬೈದ್ಯೆರುಗಳಿಗೆ ಅನ್ನ ನೈವೇದ್ಯ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ಗಂಟೆಗೆ ಶ್ರೀ ಆದಿಶಕ್ತಿ ಕಾಳಿಕಾಂಬಾ ಭಜನ ಮಂಡಳಿ ಕೆಳಗಿನ ಮನೆ ಯರ್ಲಪಾಡಿ ಇವರಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ 7 ಗಂಟೆಗೆ ಬೈದ್ಯೆರುಗಳು ಒಲಿಮರೆಯಿಂದ ಹೊರಡುವುದು. ನಂತರ ಬ್ರಹ್ಮ ಬೈದ್ಯೆರುಗಳ ಜಾತ್ರೆ, 9ಗಂಟೆಗೆ ಪಿಲಿಚಾಮುಂಡಿ ದೈವದ ನೇಮ, 10 ಗಂಟೆಗೆ ಬೈದ್ಯೆರುಗಳ ದರ್ಶನ ಆಗಿ ಬಾಕಿಮಾರು ಗದ್ದೆಯಲ್ಲಿ ಸುರಿಯ ಹಾಕುವುದು.
ಫೆ. 13ರಂದು ಬೆಳಿಗ್ಗೆ 8 ಗಂಟೆಗೆ ಮಾಯಿಂದಾಲೆ ನೇಮೋತ್ಸವ, 10 ಗಂಟೆಗೆ ಸ್ಥಳ ಶುದ್ಧಿ, 11 ಗಂಟೆಗೆ ಬೈದ್ಯೆರುಗಳ ದರ್ಶನ ಹಾಗೂ ಧ್ವಜಾವರೋಹಣ ನಡೆಯಲಿದೆ. ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.









































































































error: Content is protected !!
Scroll to Top