ಹೆಬ್ರಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರ ವತಿಯಿಂದ ʼಸಹಕಾರʼ ಕುರಿತಾಗಿ ನಡೆದ ರಾಜ್ಯ ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆಯಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ಮುನಿಯಾಲಿನ ಶ್ವೇತಾ ಆಚಾರ್ಯ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಶ್ವೇತಾ ಆಚಾರ್ಯ ʼಸಹಕಾರಿ ಸಂಘಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಸ್ವಾಯತ್ತತೆ ನೀಡಿದಾಗ ಮಾತ್ರ ಚಳುವಳಿಯ ಬೆಳವಣಿಗೆ ಸಾಧ್ಯʼ ಎಂಬ ವಿಷಯದ ಕುರಿತಾದ ಚರ್ಚಾ ಸ್ಪರ್ಧೆಯಲ್ಲಿ ವಿಚಾರ ಮಂಡಿಸಿದ್ದಾರೆ. ಇವರು ಮುನಿಯಾಲಿನ ಶಕೀಲಾ ಭಾಸ್ಕರ ಆಚಾರ್ಯ ದಂಪತಿ ಪುತ್ರಿ.
ರಾಜ್ಯ ಮಟ್ಟದ ಸಹಕಾರ ಚರ್ಚಾ ಸ್ಪರ್ಧೆ : ಮುನಿಯಾಲಿನ ಶ್ವೇತಾ ಆಚಾರ್ಯ ಪ್ರಥಮ






























































