ಯುವಜನೆತಯ ಬದ್ಧತೆಯಿಂದ ದೇಶದ ಉನ್ನತಿ – ಸುಬೆದಾರ್ ಮೈಕಲ್ ಕ್ರಿಪ್ಸನ್ ಕರ್ಕಡ
ಕಾರ್ಕಳ : ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಭಾರತೀಯ ಸೇನೆಯ ನಿವೃತ್ತ ಸುಬೆದಾರ್ ಮೈಕಲ್ ಕ್ರಿಪ್ಸನ್ ಕರ್ಕಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಭಾರತ ದೇಶ ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಯುವ ಜನತೆ ಬದ್ಧತೆಯಿಂದ ದೇಶಕ್ಕಾಗಿ ದುಡಿದಾಗ ನಮ್ಮ ದೇಶ ಇನ್ನೂ ಉನ್ನತಿಗೇರಲು ಸಾಧ್ಯ. ಮಕ್ಕಳು ತಮ್ಮನ್ನು ತಾವು ಧನಾತ್ಮಕ ಬದಲಾವಣೆಗೆ ಒಳಪಡಿಸಿಕೊಳ್ಳಬೇಕು. ಅದೇ ರೀತಿ ಮಕ್ಕಳು ತಮ್ಮ ಶಾಲೆ, ಗುರುಗಳು, ತಂದೆ ತಾಯಿ ಹಾಗೂ ದೇಶವನ್ನು ಮರೆಯದೆ ಗೌರವದಿಂದ ಕಾಣಬೇಕು ಎಂದು ಹೇಳಿದರು.

7ನೇ ತರಗತಿಯ ವಿದ್ಯಾರ್ಥಿನಿ ಯುಕ್ತ ಗಣರಾಜ್ಯೋತ್ಸವದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಪದವಿ ಪೂರ್ವ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಮುಖ್ಯ ಶಿಕ್ಷಕರಾದ ಪ್ರೌಢಶಾಲಾ ವಿಭಾಗದ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ರುಡಾಲ್ಫ್ ಕಿಶೋರ್ ಲೋಬೊ ಉಪಸ್ಥಿತರಿದ್ದರು. 9ನೇ ತರಗತಿಯ ಝುಬೇದ ಸ್ವಾಗತಿಸಿ, ಕವನ ವಂದಿಸಿದರು. ಲೆನಿಶಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.































































