ರಿಪೇರಿಗಾಗಿ ಗ್ಯಾರೇಜ್‌ ಹೊರಗೆ ಇಟ್ಟಿದ್ದ ಬೈಕ್‌ ಕಳವು

ಕಾರ್ಕಳ : ರಿಪೇರಿಗಾಗಿ ಗ್ಯಾರೇಜ್‌ ಹೊರಗೆ ಇಟ್ಟಿದ್ದ ಬೈಕ್‌ ಕಳವುಗೈದ ಘಟನೆ ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಕಸಬಾ ಗ್ರಾಮದ ವಿಕೆ ಕ್ಯಾಶ್ಯು ಫ್ಯಾಕ್ಟರಿಯ ಮುಂಭಾಗದಲ್ಲಿ ನಿತಿನ್‌ ಎಂಬವರ ಶ್ರೀಕಾಳಿಕಾಂಬ 2 ವೀಲರ್‌ ವರ್ಕ್‌ ಶಾಪ್‌ಗೆ ಜ. 19 ರಂದು ರಿಪೇರಿಗಾಗಿ ಬಂದಿದ್ದ KA-18-E-2223ನೇ ನೋಂದಾಯಿತ ಯಮಹಾ ಕಂಪೆನಿಯ ಮೋಟಾರ್ ಬೈಕ್‌ನ್ನು ಗ್ಯಾರೇಜ್‌ಗೆ ಹೊರಗಡೆ ನಿಲ್ಲಿಸಿದ್ದಾರೆ. ಜ. 20ರಂದು ಬೆಳಿಗ್ಗೆ ಬಂದು ನೋಡಿದಾಗ ಬೈಕ್‌ ಕಳವಾಗಿರುವುದು ಗಮನಕ್ಕೆ ಬಂದಿರುತ್ತದೆ. ಜ. 19 ರಾತ್ರಿ 00:45 ಗಂಟೆಯಿಂದ ಜ. 20ರ ಬೆಳಿಗ್ಗೆ 9 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಬೈಕ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನಿತಿನ್‌ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top