ಕಾರ್ಕಳ : ಬೈಂದೂರಿನಲ್ಲಿ ಜ. 5 ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬೋಳ ಗ್ರಾಮದ ಪ್ರಾಪ್ತಿ .ಎಸ್. ಪೂಜಾರಿ 12 ವಯೋಮಿತಿಯ ಕುಮುಟೆ ವಿಭಾಗದಲ್ಲಿ ಚಿನ್ನದ ಪದಕ, ಕಟ ವಿಭಾಗದಲ್ಲಿ ಬೆಳ್ಳಿಯ ತಮ್ಮದಾಗಿಸಿಕೊಂಡರೆ 8 ವಯೋಮಿತಿಯ ವಿಭಾಗದಲ್ಲಿ ಆಯುಷ್ ಎಸ್. ಪೂಜಾರಿ ಭಾಗವಹಿಸಿ ಕುಮುಟೆ ಮತ್ತು ಕಟದಲ್ಲಿ ಕಂಚಿನ ಪದಕಗಳನ್ನು ಪಡೆದಿರುತ್ತಾರೆ. ಇವರಿಬ್ಬರು ಬೋಳ ಗ್ರಾಮದ ಪುಷ್ಪಾ ಸತೀಶ್ ಮತ್ತು ಸತೀಶ್ ದಂಪತಿಯ ಮಕ್ಕಳಾಗಿದ್ದು, ಕರಾಟೆ ಶಿಕ್ಷಕ ಸತೀಶ್ ಬೆಳ್ಮಣ್ ಅವರಿಂದ ತರಬೇತಿ ಪಡೆದಿರುತ್ತಾರೆ. ಶ್ರೀ ಲಕ್ಷ್ಮೀಜನಾರ್ಧನ ಇಂಟರ್‌ನ್ಯಾಷ್ನಲ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕರಾಟೆ ಚಾಂಪಿಯನ್‌ಶಿಪ್ – ಬೋಳದ ಪ್ರಾಪ್ತಿ, ಆಯುಷ್ ಸಾಧನೆ







































