ಕಾರ್ಕಳ : ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಅಕ್ಷಯ್ ಜೈನ್ ಕೆರ್ವಾಶೆ 2ನೇ ಬಾರಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಅಧಿಕಾರವಧಿಗೆ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಉಳಿದ 11 ಮಂದಿ ನಿರ್ದೇಶಕರಾದ ಅನಿಲ್ ಎಸ್. ಪೂಜಾರಿ, ಕೃಷ್ಣ ಶೆಟ್ಟಿ ನಲ್ಲೂರು, ನಾಗೇಶ್ ಭಂಡಾರಿ ಬಜಗೋಳಿ, ಸುಧಾಕರ್ ಡೋಂಗ್ರೆ ಮಾಳ, ನಂದಗೋಪಾಲ್ ಮಾಳ, ವೆಂಕಟೇಶ್ ಗೋರೆ ಮಾಳ, ಗೀತಾ ಪಾಟ್ಕರ್ ಮುಡಾರು, ಸುಮಿತ್ ನಲ್ಲೂರು, ರಾಜೇಶ್ವರಿ ನಾಯ್ಕ್ ಮಾಳ, ಅಣ್ಣಿ ಕೆರ್ವಾಶೆ, ಉಷಾ ಶೆಟ್ಟಿ ಮಾಳ ಅವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಅಕ್ಷಯ್ ಜೈನ್ ಕೆರ್ವಾಶೆ ಅವಿರೋಧ ಆಯ್ಕೆ







































