ಯುವ ಯಕ್ಷಗಾನ ಕಲಾವಿದ ಅಪಘಾತಕ್ಕೆ ಬಲಿ

ಮಂಗಳೂರು: ಯುವ ಯಕ್ಷಗಾನ ಕಲಾವಿದ, ಕಾಲೇಜು ವಿದ್ಯಾರ್ಥಿ ಪ್ರವೀತ್‌ ಕುಮಾರ್‌ (22) ನಗರ ಹೊರವಲಯದ ಅರ್ಕುಳ ಜಂಕ್ಷನ್‌ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತಿ ಯಕ್ಷಗಾನ ಮೇಳದ ಕಲಾವಿದರಾಗಿದ್ದರು. ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್‌ ಮಂಗಳವಾರ ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಅರ್ಕುಳ ಜಂಕ್ಷನ್‌ ಬಳಿ ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಐಸ್‌ಕ್ರೀಂ ಸಾಗಿಸುತ್ತಿದ್ದ ವಾಹನ ಪ್ರವೀತ್‌ ಮೇಲೆ ಹರಿದಿದೆ. ಇದರ ಪರಿಣಾಮ ಪ್ರವೀತ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ನಗರ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಸಿಹಿತ್ಲು ಮೇಳದ ಈ ಬಾರಿಯ ಪ್ರಮುಖ ಪ್ರಸಂಗ ಕತೆಗಾರ್ತಿ ಕಲ್ಪನಾದಲ್ಲಿ ಅವರು ಪ್ರಮುಖ ಪಾತ್ರವಾದ ಕಲ್ಪನಾ ಪಾತ್ರ ಮಾಡುತ್ತಿದ್ದರು. ದೇವಿ ಮುಂತಾದ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು.





























































































































error: Content is protected !!
Scroll to Top