ಕಾರ್ಕಳ : ಶೆಡ್‌ನಲ್ಲಿದ್ದ ಕೋಳಿಗಳನ್ನು ಕಳವುಗೈದಿರುವ ಘಟನೆ ಬೆಳ್ಮಣ್ ಗ್ರಾಮದಲ್ಲಿ ಸಂಭವಿಸಿದೆ. ಇನ್ನಾದ ಉದಯ ಎಂಬವರು ಬೆಳ್ಮಣ್ ಗ್ರಾಮದ ಚರ್ಚ್ ಬಳಿ ದಿವಾಕರ ಎಂಬವರ ಜಾಗದಲ್ಲಿ ಶೆಡ್ ಮಾಡಿ ಮಾರಾಟ ಮಾಡುವ ಕೋಳಿ ಹುಂಜಗಳನ್ನು ಸಾಕುತ್ತಿದ್ದು, ನ. 26 ರಂದು ಸಂಜೆ 5 ಗಂಟೆಗೆ ಕೋಳಿಗಳನ್ನು ಕಬ್ಬಿಣದ ಗೂಡಿನಲ್ಲಿ ಹಾಕಿ ಮನೆಗೆ ಹೋಗಿದ್ದಾರೆ. ನ. 27 ಬೆಳಿಗ್ಗೆ 9 ಗಂಟೆಗೆ ಶೆಡ್‌ಗೆ ಬಂದು ನೋಡಿದಾಗ ಗೂಡಿನಲ್ಲಿದ್ದ 21 ಕೋಳಿಗಳ ಪೈಕಿ 10 ಹುಂಜ ಕೋಳಿಗಳು ಇಲ್ಲದಿರುವುದು ಗಮನಕ್ಕೆ ಬಂದಿರುತ್ತದೆ. ಯಾರೋ ಕಳ್ಳರು ಶೆಡ್‌ನ ಮೇಲಿನ ಶೀಟ್‌ನ ಹುಕ್‌ನ್ನು ಬಿಚ್ಚಿ ಶೆಡ್‌ನ ಒಳಪ್ರವೇಶಿಸಿ 30,000 ಮೌಲ್ಯದ 10 ಹುಂಜಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೋಳಿ ಕಳವು – ದೂರು ದಾಖಲು






























































