ಕಾರ್ಕಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪೂರ್ಣಕಾಲಿಕ ಹಾಗೂ ಪದವೀಧರೇತರ ಮುಖ್ಯ ಶಿಕ್ಷಕರ ಸಂಘದ ಕಾರ್ಕಳ ಶಾಖೆಯ ಸಭೆ ನ.30ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಾರ್ಕಳ ಇದರ ಸಭಾಭವನದಲ್ಲಿ ತಾಲೂಕು ಉಪಾಧ್ಯಕ್ಷೆ ಶಶಿಕಲಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಜಿಲ್ಲಾಧ್ಯಕ್ಷ ಸಂಜೀವ ದೇವಾಡಿಗ ಮತ್ತು ಜಿಲ್ಲಾ ಉಪಾಧ್ಯಕ್ಷ ವಿಜಯ ಕುಮಾರ್ ಪಿ. ನೇತೃತ್ವ ವಹಿಸಿದ್ದರು.
ಸಭೆಯಲ್ಲಿ ಕಾರ್ಕಳ ತಾಲೂಕು ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ದೇವಿದಾಸ್ ಪಾಟ್ಕರ್ ಸ.ಹಿ.ಪ್ರಾ ಶಾಲೆ ಬೊರ್ಗಲ್ಗುಡ್ಡೆ, ಉಪಾಧ್ಯಕ್ಷರಾಗಿ ದಯಾನಂದ ನಾಯಕ್ ಸ.ಹಿ.ಪ್ರಾ. ಶಾಲೆ ಕುಕ್ಕುಜೆ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿಸ.ಹಿ.ಪ್ರಾ ಶಾಲೆ ಎಲಿಯಾಳ, ಜೊತೆ ಕಾರ್ಯದರ್ಶಿಯಾಗಿ ರೇವತಿ ನಾಯಕ್ ಸ.ಹಿ.ಪ್ರಾ ಶಾಲೆ ಅಯ್ಯಪ್ಪ ನಗರ, ಕೋಶಾಧಿಕಾರಿಯಾಗಿ ಮನೋಹರ್ ಸ.ಹಿ.ಪ್ರಾ. ಶಾಲೆ ಕಲ್ಲಗುಪ್ಪೆ, ಸಂಘಟನಾ ಕಾರ್ಯದರ್ಶಿಗಳಾಗಿ ಭುಜಂಗ ಸ.ಹಿ.ಪ್ರಾ ಶಾಲೆ ಚೌಕಿಯಂಗಡಿ ಮತ್ತು ರಂಗಸ್ವಾಮಿ. ಸ.ಹಿ.ಪ್ರಾ ಶಾಲೆ.ಮುಂಡ್ಕೂರು.
ಆಯ್ಕೆಯಾದರು.
ಸರ್ಕಾರಿ ನೌಕರರ ಸಂಘದ ಕಾರ್ಕಳ ಶಾಖೆಯ ಪ್ರಧಾನ ಕಾರ್ಯದರ್ಶಿ ಗೀತಾ , ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದ ಪೂಜಾರಿ, ಕಾರ್ಕಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ದೇವಿದಾಸ್ ಪಾಟ್ಕರ್ ಮುಂತಾದವರು ಉಪಸ್ಥಿತರಿದ್ದರು.






























































