ಸುಮಲತಾ ಬಜಗೋಳಿ ಅವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

ಕಾರ್ಕಳ : ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ಕೊಡಮಾಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಹಿಮಾಲಯ ಪರ್ವತಾರೋಹಣ ಸಾಧನೆಗೈದಿರುವ ಕಾರ್ಕಳ ತಾಲೂಕು ಬಜಗೋಳಿಯ ಸುಮಲತಾ ಭಾಜನರಾಗಿದ್ದಾರೆ. ನ. 29ರಂದು ಬೆಂಗಳೂರು ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಕಲೆ , ಸಾಹಿತ್ಯ, ಸಂಗೀತ, ಸಂಸ್ಕೃತಿ, ನೃತ್ಯ, ರಂಗಭೂಮಿ, ಚಲನಚಿತ್ರ, ಜಾನಪದ, ಕೃಷಿ, ಉದ್ಯಮ, ಶಿಕ್ಷಣ, ಸಮಾಜ ಸೇವೆ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಯಕ್ಷಗಾನ, ಆಡಳಿತ, ಕ್ರೀಡೆ ನಾಡು-ನುಡಿ,ಇತಿಹಾಸ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸಮಾಜ ಸೇವಕರಿಗೆ, ಪ್ರತಿಭಾನ್ವಿತರಿಗೆ, ಕಲಾಭೂಮಿ ಪ್ರತಿಷ್ಠಾನವು ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.





























































































































error: Content is protected !!
Scroll to Top