ಡಿ. 3ರಂದು ಕಾರ್ಕಳದಲ್ಲಿ ಮೇಳೈಸಲಿದೆ ಆಳ್ವಾಸ್‌ ಸಾಂಸ್ಕೃತಿಕ ವೈಭವ

ಕಾರ್ಕಳ : ಭಾರತೀಯ ಸಂಸ್ಕೃತಿ, ಪರಂಪರೆಯ ಅನಾವರಣ, ಸಾಂಸ್ಕೃತಿಕ ರಸದೌತಣ, ಮೈನವಿರೇಳಿಸುವ ಕಲಾಪ್ರಕಾರಗಳ ಪ್ರದರ್ಶನ, 400 ಮಂದಿ ಆಳ್ವಾಸ್‌ ವಿದ್ಯಾರ್ಥಿಗಳಿಂದ ಭರಪೂರ ಮನೋರಂಜನೆ, ಬೆರಗು ಮೂಡಿಸುವ ಚಿತ್ರಣ. ಇಂತಹ ಅಪೂರ್ವ ಸಮಾರಂಭಕ್ಕೆ ಡಿ. 3ರ ಮಂಗಳವಾರ ಸಂಜೆ ಸಾಕ್ಷಿಯಾಗಲಿದೆ ಕಾರ್ಕಳದ ಗಾಂಧಿ ಮೈದಾನ.

ಬೃಹತ್‌ ವೇದಿಕೆ
ಗಾಂಧಿ ಮೈದಾನದ ವಿಶಾಲ ಸಭಾಂಗಣದಲ್ಲಿ 80*32 ಅಡಿ ವಿಸ್ತಾರವಾದ ವೇದಿಕೆಯಲ್ಲಿ ಜಗಮಗಿಸುವ ವಿದ್ಯುತ್ ದೀಪಾಲಂಕಾರದೊಂದಿಗೆ ಸಂಜೆ 5:45ರಿಂದ ಎರಡೂವರೆ ಗಂಟೆಗಳ ಕಾಲ ಸಭಿಕರ ಕಣ್ಮನ ಸೆಳೆದು ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ಯಲಿದೆ ಆಳ್ವಾಸ್‌ ಸಾಂಸ್ಕೃತಿಕ ತಂಡ.

ಶಾಸ್ತ್ರೀಯ ನೃತ್ಯ – ಭೋ ಶಂಭೋ, ಗುಜರಾತ್‌ನ ಗಾರ್ಭ ಮತ್ತು ದಾಂಡಿಯಾ, ಬಡಗುತಿಟ್ಟು ಯಕ್ಷಗಾನ ರಾಸಲೀಲೆ, ಮಣಿಪುರಿ ಸ್ಟಿಕ್‌ ಡಾನ್ಸ್‌, ಮಲ್ಲಕಂಬ ಹಾಗೂ ರೋಪ್‌ ಕಸರತ್ತು, ಡೊಳ್ಳು ಕುಣಿತ, ಸೃಜನಾತ್ಮಕ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್‌ ನೃತ್ಯ, ಕಥಕ್‌ ನೃತ್ಯ, ವರ್ಷಧಾರೆ, ಬೊಂಬೆ ವಿನೋದಾವಳಿ ನೆರೆದವರನ್ನು ರಂಜಿಸಲಿದೆ.

ಡಾ. ಮೋಹನ್‌ ಆಳ್ವರು ಶೈಕ್ಷಣಿಕ, ವೈದ್ಯಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಜನತೆಗೆ ಆಳ್ವಾಸ್‌ ಸಾಂಸ್ಕೃತಿಕ ವೈಭವವನ್ನು ಉಣಬಡಿಸುವ ನಿಟ್ಟಿನಲ್ಲಿ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಸಮಾರಂಭ ಆಯೋಜನೆಗೊಳಿಸಿದ್ದೇವೆ.
ವಿಜಯ ಶೆಟ್ಟಿ
ಅಧ್ಯಕ್ಷರು, ಆಳ್ವಾಸ್‌ ನುಡಿಸಿರಿ – ವಿರಾಸತ್‌ ಘಟಕ ಕಾರ್ಕಳ



































































































error: Content is protected !!
Scroll to Top