ಸಮಾಜದಲ್ಲಿ ಸಾರ್ವಜನಿಕ ನೆಮ್ಮದಿಯನ್ನು ಹಾಳುಮಾಡುವ ಅಥವಾ ಸಾರ್ವಜನಿಕರ ಹಿತಾಸಕ್ತಿಗೆ ತೊಂದರೆ ಅಥವಾ ಅಪಾಯ ಉಂಟುಮಾಡುವ ಅಥವಾ ಸಾರ್ವಜನಿಕ ಶಾಂತಿಯನ್ನು ಕದಡುವ ದುರುದ್ದೇಶದಿಂದ ನಡೆಸುವ ಯಾವುದೇ ಅಪರಾಧಗಳನ್ನು ಅಂದರೆ ಅಪರಾಧಿಕ ಬಲದಿಂದ ಅಥವಾ ಅಪರಾಧಿಕ ಬಲದ ಪ್ರದರ್ಶನದಿಂದ, ಕೇಂದ್ರ ಸರ್ಕಾರಕ್ಕೆ ಅಥವಾ ಯಾವುದೇ ರಾಜ್ಯ ಸರ್ಕಾರಕ್ಕೆ ಅಥವಾ ಸಂಸತ್ತಿಗೆ ಅಥವಾ ಯಾವುದೇ ರಾಜ್ಯದ ವಿಧಾನಮಂಡಲಕ್ಕೆ ಅಥವಾ ಲೋಕ ನೌಕರನಾಗಿ ತನ್ನ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಯಾರೇ ಲೋಕ ನೌಕರನಿಗೆ ಭಯವನ್ನು ಹುಟ್ಟಸುವ ಅಥವಾ ಯಾವುದೇ ಕಾನೂನಿನ ಅಥವಾ ಯಾವುದೇ ಕಾನೂನು ಪ್ರಕ್ರಿಯೆಯ ಜಾರಿಯನ್ನು ಪ್ರತಿರೋಧಿಸುವ ಅಥವಾ ಯಾವುದೇ ಕೇಡನ್ನು ಅಥವಾ ಅಪರಾಧಿಕ ಅತಿಕ್ರಮಣ ಪ್ರವೇಶವನ್ನು ಅಥವಾ ಇತರ ಅಪರಾಧವನ್ನು ಮಾಡುವ ಅಥವಾ ಯಾರೇ ವ್ಯಕ್ತಿಗೆ ಅಪರಾಧಿಕ ಬಲವನ್ನು ಪ್ರಯೋಗಿಸಿ ಅಥವಾ ಅಪರಾಧಿಕ ಬಲವನ್ನು ಪ್ರದರ್ಶಿಸಿ, ಯಾವುದೇ ಸ್ವತ್ತನ್ನು ತೆಗೆದುಕೊಳ್ಳುವುದಾಗಿದ್ದರೆ ಅಥವಾ ಅದರ ಸ್ವಾಧೀನವನ್ನು ಪಡೆಯುವುದಾಗಿದ್ದರೆ ಅಥವಾ ಯಾರೇ ವ್ಯಕ್ತಿಯ ಮಾರ್ಗದ ಅಥವಾ ನೀರಿನ ಬಳಕೆಯ ಅಧಿಕಾರದ ಅಥವಾ ಅವನ ಅನುಭೋಗದಲ್ಲಿ ಇರುವ ಅಥವಾ ಸ್ವಾಧೀನದಲ್ಲಿ ಇರುವ ಇತರ ಅಮೂರ್ತ ಅಧಿಕಾರದ ಅನುಭೋಗವನ್ನು ತಪ್ಪಿಸುವುದಾಗಿದ್ದರೆ ಅಥವಾ ಯಾವುದೇ ಅಧಿಕಾರವನ್ನು ಅಥವಾ ಇದೆಯೆಂದು ಭಾವಿಸಿರುವ ಅಧಿಕಾರವನ್ನು ಕಾರ್ಯಗತಗೊಳಿಸುವ ಅಥವಾ ಅಪರಾಧಿಕ ಬಲವನ್ನು ಪ್ರಯೋಗಿಸಿ ಅಥವಾ ಅಪರಾಧಿಕ ಬಲವನ್ನು ಪ್ರದರ್ಶಿಸಿ ಯಾರೇ ವ್ಯಕ್ತಿಯು ಕಾನೂನುಸಮ್ಮತವಾಗೆ ಮಾಡಬೇಕಾಗಿಲ್ಲದಿರುವ ಯಾವುದೇ ಕೃತ್ಯವನ್ನು ಮಾಡುವಂತೆ ಅಥವಾ ಅವನು ಕಾನೂನುಸಮ್ಮತವಾಗಿ ಯಾವುದನ್ನು ಮಾಡಲು ಹಕ್ಕುಳ್ಳವನಾಗಿರುವನೋ ಅದನ್ನು ಮಾಡದ ಹಾಗೆ ಒತ್ತಾಯಿಸುವ ಏಕೋದ್ದೇಶದಿಂದ ಐದು ಅಥವಾ ಹೆಚ್ಚು ಜನರ ಕಾನೂನುಬಾಹಿರ ಕೂಟವನ್ನು ರಚಿಸುವುದು, ಅಂತಹ ಕಾನೂನುಬಾಹಿರ ಕೂಟದ ಮೂಲಕ ದೊಂಬಿ, ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸುವುದು, ಮತ್ತು ಇಂತಹ ಅಪರಾಧ ಮಾಡುವುದಕ್ಕಾಗಿ ಮಾರಕ ಆಯುಧವನ್ನು ಉಪಯೋಗಿಸುವುದು, ದೊಂಬಿ ಮತ್ತಿತರ ಕೃತ್ಯಗಳನ್ನು ದಮನಮಾಡಲು ಪ್ರಯತ್ನಿಸುವ ಸಾರ್ವಜನಿಕ ಅಧಿಕಾರಿಗಳ ಮೇಲೆ ಹಲ್ಲೆನಡೆಸುವುದು, ಅಥವಾ ಅಡ್ಡಿ ಪಡಿಸುವುದು ಅಥವಾ ವಿವಿಧ ಗುಂಪುಗಳ ನಡುವೆ ಮತ, ಮೂಲ ವಂಶ, ಜನ್ಮ ಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉಂಟುಮಾಡುವುದು ಮತ್ತು ಸೌಹಾರ್ದತೆಗೆ ಬಾಧಕವಾಗುವ ಕೃತ್ಯಗಳನ್ನು ನಡೆಸಿ ಸಮುದಾಯಗಳ ನಡುವೆ ಅಸೌಹಾರ್ದತೆ ಅಥವಾ ವೈರತ್ವ, ದ್ವೇಷ ಅಥವಾ ವೈಮನಸ್ಸು ಉಂಟಾಗುವಂತೆ ಉತ್ತೇಜಿಸುವುದು, ವಿವಿಧ ಧಾರ್ಮಿಕ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ, ಜಾತಿಯ ಅಥವಾ ಕೋಮುಗಳ ನಡುವಿನ ಸೌಹಾರ್ದದತೆಗೆ ಬಾಧಕವಾಗುವ ಕೃತ್ಯವನ್ನು ನಡೆಸಿ ಸಾರ್ವಜನಿಕ ನೆಮ್ಮದಿಯನ್ನು ಕದಡುವುದು ಇತ್ಯಾದಿ ಕುಕೃತ್ಯಗಳನ್ನು ಸಾರ್ವಜನಿಕ ನೆಮ್ಮದಿಯ ವಿರುದ್ದವಾದ ಶಿಕ್ಷಾರ್ಹ ಅಪರಾಧಗಳು ಎಂಬುದಾಗಿ ಪರಿಗಣಿಸಲ್ಪಟ್ಟಿರುತ್ತದೆ ಮತ್ತು ಇಂತಹ ಅಪರಾಧವನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಆತನಿಗೆ ಪ್ರಚೋದನೆ ಅಥವಾ ಆಶ್ರಯ ನೀಡಿದ ವ್ಯಕ್ತಿ ಜೈಲುಶಿಕ್ಷೆಗೆ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗಬೇಕಾಗುತ್ತದೆ.
























