ಅಡೆತಡೆ ಓಟ – ಬಲ್ಯೊಟ್ಟು ಶಾಲೆಯ ಪೂರ್ವಜ್‌ ರಾಜ್ಯ ಮಟ್ಟಕ್ಕೆ

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಉಡುಪಿ ವಲಯ ಮತ್ತು ಶ್ರೀ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆ ಕಿದಿಯೂರು ಇವರ ಆಶ್ರಯದಲ್ಲಿ ನ.4ರಂದು ಉಡುಪಿ ಅಜ್ಜರಗಾಡು ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆ ಬಲ್ಯೊಟ್ಟು ಹೊಸ್ಮಾರು ಇಲ್ಲಿನ 8ನೇ ತರಗತಿಯ ಪೂರ್ವಜ್ ಶರ್ಮಾ ಇವರು 80 ಮೀಟರ್ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನಿಯಾಗಿ ನ. 15ರಂದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಒರಿಮಾರು ಸಂತೋಷ್ ಪುರೋಹಿತರು ಮತ್ತು ಪ್ರತಿಮಾ ಎಸ್. ದಂಪತಿಯ ಪುತ್ರ. ಸಾಧಕ ವಿದ್ಯಾರ್ಥಿಗೆ ಶಾಲಾ ಸಂಚಾಲಕ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು, ಶಿಕ್ಷಕ ವೃಂದ ರಕ್ಷಕ ವೃಂದ ಹಾಗೂ ಪೋಷಕವೃಂದ ಅಭಿನಂದಿಸಿದ್ದಾರೆ.

















































error: Content is protected !!
Scroll to Top