ಕಾರ್ಕಳ : ಕಳೆದ ತಿಂಗಳು ನಲ್ಲೂರು ಪಾಜೆಗುಡ್ಡೆಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಕುವೈಟ್ ವಿಶ್ವಕರ್ಮ ಸಂಘದಿಂದ ನೆರವು ಹಸ್ತಾಂತರಿಸಲಾಯಿತು. ಅಪಘಾತದಲ್ಲಿ ಬದುಕುಳಿದಿರುವ ವೇಣೂರಿನಲ್ಲಿರುವ ಮೀನಾಕ್ಷಿಯವರ ಕುಟುಂಬಕ್ಕೆ ಕುವೈಟ್ ವಿಶ್ವಕರ್ಮ ಸಂಘದ ಪದಾಧಿಕಾರಿಗಳು ತೆರಳಿ ನೆರವು ಹಸ್ತಾಂತರಿಸಿದರು. ಕುವೈಟ್ ವಿಶ್ವಕರ್ಮ ಸಂಘದ ಸದಸ್ಯ ರಾಜೇಶ್ ಆಚಾರ್ಯ ಕೌಡೂರು ಹಾಗೂ ಅವರ ಮಿತ್ರರಾದ ಸತ್ಯಮಣಿ ಮನೋಜ್, ವಿನಯ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಪಾಜೆಗುಡ್ಡೆ ಅಪಘಾತ ಸಂತ್ರಸ್ತ ಕುಟುಂಬಕ್ಕೆ ಕುವೈಟ್ ವಿಶ್ವಕರ್ಮ ಸಂಘದಿಂದ ನೆರವು ಹಸ್ತಾಂತರ






























































