ಇಂಡೋನೇಶಿಯಾ : ಜ್ವಾಲಾಮುಖಿ ಸ್ಫೋಟ : 9 ಸಾವು, ಇಡೀ ಅರಣ್ಯ ಸುಟ್ಟು ಕರಕಲು!

ಜಕಾರ್ತ: ಇಂಡೋನೇಷ್ಯಾದಲ್ಲಿ ಮತ್ತೊಂದು ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಪರಿಣಾಮ 9 ಮಂದಿ ಸಾವಿಗೀಡಾಗಿ ಒಂದಿಡೀ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ತೀವ್ರಗೊಂಡಿದ್ದು, ಇಲ್ಲಿನ ಅರಣ್ಯ ಪ್ರದೇಶವೂ ಸೇರಿದಂತೆ ಹಲವು ಮನೆಗಳು ಭಸ್ಮವಾಗಿವೆ. ಈ ಜ್ವಾಲಾಮುಖಿಯಿಂದ ಸಂಭವಿಸಿದ ವಿವಿಧ ಅವಘಡಗಳಲ್ಲಿ ಈವರೆಗೂ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಅಂತೆಯೇ ಕಳೆದ ಗುರುವಾರದಿಂದ ಜ್ವಾಲಾಮುಖಿಯು ಪ್ರತಿದಿನ 2,000 ಮೀಟರ್ (6,500 ಅಡಿ) ಎತ್ತರದವರೆಗೆ ದಟ್ಟವಾದ ಕಂದುಬಣ್ಣದ ಬೂದಿಯನ್ನು ಉಗುಳುತ್ತಿದೆ. ಭಾನುವಾರ ಮಧ್ಯರಾತ್ರಿ ನಂತರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ ದಟ್ಟವಾದ ಕಂದುಬಣ್ಣದ ಬೂದಿಯನ್ನು ಉಗುಳಿದೆ. ಈ ಬಿಸಿ ಬೂದಿಯು ಹತ್ತಿರದ ಹಳ್ಳಿಗೆ ಅಪ್ಪಳಿಸಿದೆ. ಅವಘಡದಲ್ಲಿ ಕ್ಯಾಥೋಲಿಕ್ ಸನ್ಯಾಸಿಗಳ ಕಾನ್ವೆಂಟ್ ಸೇರಿದಂತೆ ಹಲವಾರು ಮನೆಗಳು ಸುಟ್ಟುಹೋಗಿವೆ ಎಂದು ಜ್ವಾಲಾಮುಖಿ ಮೇಲ್ವಿಚಾರಣಾ ಅಧಿಕಾರಿ ಫರ್ಮಾನ್ ಯೋಸೆಫ್ ಹೇಳಿದ್ದಾರೆ.





























































































































error: Content is protected !!
Scroll to Top