ಅಜೆಕಾರು : ಗೂಡ್ಸ್‌ ವಾಹನ ಡಿಕ್ಕಿ – ಕಾರ್ಮಿಕ ಸಾವು

ಕಾರ್ಕಳ : ಗೂಡ್ಸ್‌ ವಾಹನವೊಂದು ಡಿಕ್ಕಿಯಾಗಿ ತಮಿಳುನಾಡು ಮೂಲದ ಕಾರ್ಮಿಕ ಮೃತಪಟ್ಟ ಘಟನೆ ಅ. 26ರಂದು ಬೆಳಿಗ್ಗೆ ಅಜೆಕಾರಿನಲ್ಲಿ ಸಂಭವಿಸಿದೆ.
ಆಸೈ ತಂಬಿ (21) ಮೃತ ದುರ್ದೈವಿ. ಇವರು ಕಳೆದ ಎರಡು ದಿನದ ಹಿಂದೆ ಉದ್ಯೋಗವನ್ನರಸಿ ಅಜೆಕಾರಿಗೆ ಬಂದಿದ್ದರು. ಅಜೆಕಾರು ಗುಡ್ಡೆಯಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಕೆಲಸಕ್ಕೆ ಹೋಗಲೆಂದು ಮನೆಯ ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದರು. ಈ ವೇಳೆ ಮೂಡುಬಿದಿರೆಯಿಂದ ಕಾರ್ಕಳ-ಹೆಬ್ರಿ ಮಾರ್ಗವಾಗಿ ಹುಬ್ಬಳಿಗೆ ಸಾಗುತ್ತಿದ್ದ ಗೂಡ್ಸ್‌ ವಾಹನ ತೀರಾ ಬಲಬದಿಗೆ ಬಂದು ರಸ್ತೆ ಬದಿ ನಿಂತಿದ್ದ ಆಸೈ ತಂಬಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆಸೈ ತಂಬಿ ತೀವ್ರ ಗಾಯಗೊಂಡಿದ್ದು, ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಅವರನ್ನು 108 ಮೂಲಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆಸೈ ತಂಬಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top