ಮರದ ಮಿಲ್ಲ್‌ಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ಸಾಮಾಗ್ರಿ ಕಳವು – ದೂರು ದಾಖಲು

ಕಾರ್ಕಳ : ಮರದ ಮಿಲ್ಲ್‌ಗೆ ಅಳವಡಿಸಿದ ಸಿಸಿ ಕ್ಯಾಮೆರಾ ಹಾಗೂ ಇತರ ಸಾಮಾಗ್ರಿಗಳನ್ನು ಕಳವು ಮಾಡಿರುವ ಘಟನೆ ಅ.25ರಂದು ಕಾರ್ಕಳದಲ್ಲಿ ಸಂಭವಿಸಿದೆ. ನಾರಾವಿಯ ಪ್ರಕಾಶ ಎಂಬುವವರು 2023ರ ಅ. 10ರಿಂದ 2028ರ ಅ. 14ರವರೆಗೆ 5 ವರ್ಷದ ಅವಧಿಗೆ ಕಸಬಾ ಗ್ರಾಮದ ಗಾಂಧಿ ಮೈದಾನದ ಬಳಿಯಿರುವ ನಿರ್ಮಲಾ ಸ್ವಾ-ಮಿಲ್ಲ್ (ಮರದ ಮಿಲ್ಲ್‌)ನ್ನು ಲೀಸ್‌ಗೆ ಪಡೆದುಕೊಂಡಿದ್ದಾರೆ. ಇಲ್ಲಿ ಮರದ ಕೆಲಸ ಮಾಡುತ್ತಿರುವಾಗ 1ನೇ ಆರೋಪಿ ನಿರ್ಮಲಾ ಕಂಪೌಂಡಿನ ಕೆ. ಸಂತೋಷ ಎಂಬುವವರು ಅ. 5ರಂದು ವರ್ಕ್‌ಶಾಪ್‌ನ ಗೇಟ್‌ಗೆ ಬೀಗ ಹಾಕಿರುತ್ತಾರೆ. ನಂತರ ಅ. 25ರಂದು ಬೆಳಿಗ್ಗೆ ಸುಮಾರು 11.51ಕ್ಕೆ ಸಂತೋಷ್‌ ಇನ್ನೊರ್ವ ಆರೋಪಿಯೊಂದಿಗೆ ಸ್ವಾ-ಮಿಲ್ಲ್‌ಗೆ ಪ್ರವೇಶಿಸಿ ಮಿಲ್ಲ್‌ಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಹಾಗೂ ಇತರ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪ್ರಕಾಶ್‌ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.























































error: Content is protected !!
Scroll to Top