ಹೆಬ್ರಿ : ವಿಷ ಸೇವಿಸಿ ಕೆರೆಗೆ ಹಾರಿ ವೃದ್ಧ ಆತ್ಮಹತ್ಯೆ

ಹೆಬ್ರಿ : ವಿಷ ಸೇವಿಸಿ ಕೆರೆಗೆ ವೃದ್ಧರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ. 22ರಂದು ಕುಚ್ಚೂರು ಗ್ರಾಮದಲ್ಲಿ ಸಂಭವಿಸಿದೆ. ಶಿವರಾಮ (84) ಆತ್ಮಹತ್ಯೆಗೆ ಶರಣಾದವರು. ಇವರು ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು. ಹೆಬ್ರಿ ಪೇಟೆಗೆ ಹೋಗಿ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಬಟ್ಟೆ ಬದಲಾಯಿಸಿ ತೋಟದ ಕಡೆ ಹೋದವರು ಸಂಜೆ 7 ಗಂಟೆಯಾದರೂ ಮನೆಗೆ ಬಾರದೆ ಇದ್ದು, ಹುಡುಕಾಡಿದಾಗ ಮನೆಯ ಹತ್ತಿರದ ಕೆರೆ ಬದಿಯಲ್ಲಿ ಅವರ ಬಟ್ಟೆಗಳು ಮತ್ತು ಕೀಟನಾಶಕದ ಬಾಟಲಿಗಳು ಇರುವುದು ಗಮನಕ್ಕೆ ಬಂದಿರುತ್ತದೆ. ನಂತರ ಕೆರೆಯಲ್ಲಿ ಹುಡುಕಾಡಿದಾಗ ಶಿವರಾಮ ಅವರ ಮೃತದೇಹ ರಾತ್ರಿ 9:15 ಗಂಟೆಗೆ ಪತ್ತೆಯಾಗಿರುತ್ತದೆ. ಮೃತ ಶಿವರಾಮ ಅವರು ವಿಪರೀತ ಕುಡಿತದ ಅಬ್ಯಾಸ ಹೊಂದಿದ್ದು, ಇದೇ ಕಾರಣದಿಂದ ಮಾನಸಿಕವಾಗಿ ಮನನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಗ ಪ್ರಸನ್ನ ಕುಮಾರ್‌ ನೀಡಿದ ಮಾಹಿತಿಯಂತೆ ಹೆಬ್ರಿ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top