ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ

ಮುಂಬಯಿ : 5 ಕೋಟಿ ರೂ. ಕೊಡು ಇಲ್ಲದಿದ್ದರೆ ನಿನ್ನ ಸ್ಥಿತಿ ಬಾಬಾ ಸಿದ್ದಿಕಿಗಿಂತಲೂ ಘೋರವಾಗಿರಲಿದೆ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸರಲ್ಲಿ ಧಮ್ಕಿ ಹಾಕಿದ್ದ ಯುವಕನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಅ. 18ರಂದು ಮುಂಬಯಿ ಪೊಲೀಸರಿಗೆ ವಾಟ್ಸಪ್‌ ಮೂಲಕ ಬೆದರಿಕೆ ಕರೆ ಬಂದಿತ್ತು. ಇದಕ್ಕೂ ಕೆಲವು ದಿನ ಮೊದಲು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಶೂಟರ್‌ಗಳು ದಸರಾ ಹಬ್ಬದ ರಾತ್ರಿ ಗುಂಡಿಕ್ಕಿ ಕೊಂದಿದ್ದರು. ಇದರ ಬೆನ್ನಿಗೆ ಸಲ್ಮಾನ್‌ ಖಾನ್‌ಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಬೆದರಿಕೆ ಜಾರ್ಖಂಡ್‌ನಿಂದ ಬಂದಿರುವುದು ಪತ್ತೆಯಾಗಿತ್ತು. ಜಾರ್ಖಂಡ್‌ನ ಜೆಮ್‌ಶೆಡ್‌ಜಿಪುರದ ತರಕಾರಿ ವ್ಯಾಪಾರಿ ಶೇಕ್‌ ಹುಸೇನ್‌ ಶೇಕ್‌ ಮೌಸಿನ್‌ (24) ಎಂಬ ಯುವಕನನ್ನು ಬಂದಿಸಿ ಮುಂಬಯಿಗೆ ಕರೆತಂದಿದ್ದಾರೆ.

















































error: Content is protected !!
Scroll to Top