ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾರ್ಕಳ ತಾಲೂಕು ಬೈಲೂರು ವಲಯದ ಬೀದಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 3 ಲಕ್ಷ ರೂ. ಮೊತ್ತದ ದೇಣಿಗೆಯ ಡಿಡಿಯನ್ನು ಜನಜಾಗೃತಿ ವೇದಿಕೆಯ ಹಿರಿಯ ಸದಸ್ಯ ಕಮಲಾಕ್ಷ ನಾಯಕ್, ತಾಲೂಕಿನ ಯೋಜನಾಧಿಕಾರಿ ಹೇಮಲತ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ, ತಾಲೂಕು ಕೇಂದ್ರ ಸಮಿತಿಯ ಅಧ್ಯಕ್ಷ ಮಂಜುನಾಥ ಅವರು ದೇವಸ್ಥಾನದ ಅರ್ಚಕರಾದ ನರಸಿಂಹ ತಂತ್ರಿ ಹಾಗೂ ವರದರಾಜ ತಂತ್ರಿಯವರ ಸಮ್ಮುಖದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
ಹಿರಿಯರಾದ ಕರುಣಾಕರ ಹೆಗ್ಡೆ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಕೇಶವ ಪೈ, ಹರೀಶ್ ಆಚಾರ್ಯ, ವಕೀಲರಾದ ಸದಾನಂದ ಸಾಲ್ಯಾನ್, ಶ್ರೀಧರ್ ಪೂಜಾರಿ, ಉದಯ್ ಶೆಟ್ಟಿ, ವಿಜಯ ನಾಯ್ಕ, ನೀರೇ-ಬಿ ಒಕ್ಕೂಟದ ಅಧ್ಯಕ್ಷ
ಪ್ರಸನ್ನ ಆಚಾರ್ಯ, ನೀರೆ-ಎ ಒಕ್ಕೂಟದ ಪದಾಧಿಕಾರಿ ವಸಂತಿ, ವಲಯದ ಮೇಲ್ವಿಚಾರಕ ಯಶೋದಾ, ಸೇವಾ ಪ್ರತಿನಿಧಿಗಳಾದ ಜಯಮಾಲಾ, ಸವಿತಾ ಉಪಸ್ಥಿತರಿದ್ದರು.
ಬೀದಿ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 3 ಲ.ರೂ. ನೆರವು ಹಸ್ತಾಂತರ






























































