ದೆಹಲಿ : ಟಾಟಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ 67 ವರ್ಷದ ನೊಯೆಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಮುಂಬೈನಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆ ಬಳಿಕ ಈ ನೇಮಕ ನಡೆದಿದೆ. ಈ ಮೂಲಕ ರತನ್ ಟಾಟಾ ಅವರ ಜಾಗಕ್ಕೆ ನೊಯೆಲ್ ಬಂದಿದ್ದಾರೆ.
ಇವರು ರತನ್ ಟಾಟಾ ಅವರ ಮಲ ಸಹೋದರರಾಗಿದ್ದಾರೆ. ರತನ್ ಟಾಟಾ ಹುಟ್ಟಿದ ಮೇಲೆ ಸೂನಿ ಟಾಟಾ ಅವರಿಂದ ವಿಚ್ಛೇದನ ಪಡೆದಿದ್ದ ನವಲ್ ಟಾಟಾ, ನಂತರ ಸಿಮೋನೆ ಟಾಟಾ ಅವರನ್ನು ಮದುವೆಯಾಗಿದ್ದರು. ಅವರಿಗೆ ನೊಯೆಲ್ ಟಾಟಾ ಜನಿಸಿದ್ದರು.
ರತನ್ ಟಾಟಾ ಅವರ ನೆರಳಿನಡಿಯಲ್ಲಿ ಹೆಚ್ಚಾಗಿ ಕೆಲಸ ಮಾಡಿದ ನೋಯೆಲ್ ಈಗ ಟಾಟಾ ಟ್ರಸ್ಟ್ಗಳನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. ನೊಯಲ್ ಟಾಟಾ ಟ್ರಸ್ಟ್ ಮತ್ತು ದೊರಾಬ್ಜಿ ಟಾಟಾ ಟ್ರಸ್ಟ್ನ ಮಂಡಳಿಗಳಲ್ಲಿ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ನಾಲ್ಕು ದಶಕಗಳಿಂದ ಟ್ರಸ್ಟ್ನೊಂದಿಗೆ ಸಂಬಂಧ ಹೊಂದಿದ್ದಾರೆ.
2000 ರ ದಶಕದ ಆರಂಭದಲ್ಲಿ ಟ್ರಸ್ಟ್ಗ್ ಸೇರಿದಾಗಿನಿಂದ, ನೋಯೆಲ್ ಅದರ ವಿಸ್ತರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. 2019 ರಲ್ಲಿ ರತನ್ ಟಾಟಾ ಟ್ರಸ್ಟ್ನ ಮಂಡಳಿಗೆ ಸೇರ್ಪಡೆಯಾದರು. 2018 ರಲ್ಲಿ ಟೈಟಾನ್ ಮತ್ತು 2022 ರಲ್ಲಿ ಟಾಟಾ ಸ್ಟೀಲ್ನ ಉಪಾಧ್ಯಕ್ಷರಾಗಿ ನೇಮಕಗೊಂಡರು.































































