ಹೆಬ್ರಿ : ರಾಂಗ್‌ಸೈಡ್‌ನಲ್ಲಿ ಬಂದ ಓಮ್ನಿ ಕಾರು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ, ಹೆಬ್ರಿಯ ಬಸ್ ಏಜೆಂಟ್ ಅರವಿಂದ ಎಂಬವರು ಗಾಯಗೊಂಡು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅ. 10ರಂದು ಬೆಳಗ್ಗೆ 6.45ರ ವೇಳೆಗೆ ಬಿಳಿ ಬಣ್ಣದ ಓಮ್ನಿ ಕಾರು (KA-14-N-9257) ಕೋಳಗುಡ್ಡೆ ಬನಶಂಕರಿ ಬಳಿ ರಾಂಗ್‌ಸೈಡ್‌ನಲ್ಲಿ ಉಡುಪಿ ಕಡೆಗೆ ವಿಪರೀತ ವೇಗದಿಂದ ಹೋಗುತ್ತಿರುವಾಗ ಎದುರಿನಿಂದ ಬೈಕ್ ಬರುವುದನ್ನು ನೋಡಿ ಚಾಲಕ ಬ್ರೇಕ್ ಹಾಕಿದ್ದಾನೆ. ಈ ರಭಸಕ್ಕೆ ಕಾರು ತಿರುಗಿ ಅದರ ಹಿಂಭಾಗ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಸವಾರನ ಸಮೇತ ಬೈಕ್ ರಸ್ತೆಗೆ ಬಿದ್ದಿದೆ. ಅಪಘಾತ ಎಸಗಿದ ಕಾರು ನಿಲ್ಲದೆ ಪಲಾಯನ ಮಾಡಿದೆ. ಆಗಷ್ಟೇ ಅಂಗಡಿ ತೆರೆಯುತ್ತಿದ್ದ ಜಯ ಎಂಬವರು ಬೈಕ್ ಸವಾರ ಅರವಿಂದ ಅವರನ್ನು ಉಪಚರಿಸಿ 108 ಅಂಬುಲೆನ್ಸ್‌ನಲ್ಲಿ ಹೆಬ್ರಿ ಸಮುದಾಯ ಆಸ್ಪತೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಜಯ ಅವರು ನೀಡಿದ ದೂರಿನ ಪ್ರಕಾರ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ : ರಾಂಗ್‌ಸೈಡ್‌ನಲ್ಲಿ ಬಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ























