ಸೆ. 16 : ಶ್ರೀ ವಿಶ್ವಕರ್ಮ ವೃತ – ಹೋಮ

ಕಾರ್ಕಳ : ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಕಾರ್ಕಳ ಇದರ ವತಿಯಿಂದ ಸೆ. 16ರಂದು ಪೆರ್ವಾಜೆ ವಿಶ್ವಕರ್ಮ ಸಮಾಜ ಭವನದಲ್ಲಿ ಶ್ರೀ ವಿಶ್ವಕರ್ಮ ವ್ರತ ಹಾಗೂ ಹೋಮ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ವೃತಾರಂಭ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿ ಕಾರ್ಕಳ ಹಾಗೂ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಕಳ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7.30ಕ್ಕೆ ಪೂಜೆ, ಪ್ರಸಾದ ವಿತರಣೆ ನೆರವೇರಲಿದೆ ಎಂದು ವಿ.ಬಿ.ಎಸ್. ಸಭಾದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top