ಕಾರ್ಕಳ : ಗಾಂಧಿಮೈದಾನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ನವೀಕೃತ ಸಭಾಭವನ ಮತ್ತು ಪಾಕಶಾಲಾ ಉದ್ಘಾಟನಾ ಸಮಾರಂಭ ಸೆ. 14-15ರಂದು ನಡೆಯಲಿದೆ.
ಸೆ. 14ರಂದು ರಾತ್ರಿ ದೇವತಾ ಪ್ರಾರ್ಥನೆ, ಗುರು ಗಣೇಶ ಪೂಜೆ, ಪುಣ್ಯಾಹವಾಚನ, ವಾಸ್ತುಹೋಮ, ವಾಸ್ತು ಪೂಜೆ, ವಾಸ್ತು ಬಲಿ ಹಾಗೂ ದಿಗ್ಬಲಿ ನಡೆಯಲಿದೆ. ಸೆ. 15ರಂದು ಬೆಳಿಗ್ಗೆ 8.30ರಿಂದ ಗಣಹೋಮ, ಸುಮೂಹೂರ್ತದಲ್ಲಿ ದೀಪ ಪ್ರಜಲ್ವನೆ, ಹಾಲು ಉಕ್ಕಿಸುವುದು, ಸಭಾ ಕಾರ್ಯಕ್ರಮ ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನೆರವೇರಲಿದೆ.
ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿ. ಸುನಿಲ್ ಕುಮಾರ್ ವಹಿಸಲಿದ್ದು, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಜಯರಾಮ ಪ್ರಭು ಹಾಗೂ ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವಿಧ ದೇವಸ್ಥಾನದ ಆಡಳಿತ ಮೊಕ್ತೇಸರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಪ್ರಕಾಶ್ ಕಾರ್ಕಳ ಸಾರಥ್ಯದಲ್ಲಿ ನಾದಗಾನ ವೈಭವ ನಡೆಯಲಿದ್ದು, ಸಂಜೆ 4.30ರಿಂದ ʼರಣವೀಳ್ಯʼ ಹಾಗೂ ʼಸುಧನ್ವ ಮೋಕ್ಷʼ ತಾಳ ಮದ್ದಳೆ ನಡೆಯಲಿದೆ. ರಾತ್ರಿ 7.30ಕ್ಕೆ ಪರಿವಾರ ಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































