ಈಡಿಸ್ ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರದ ಬಗ್ಗೆ ತಿಳಿದುಕೊಳ್ಳೋಣ.
ಲಕ್ಷಣಗಳು:
ಕಾಲುಗಳು ಮತ್ತು ಕೀಲುಗಳಲ್ಲಿ ನೋವು.
104F ಜ್ವರ ವೇಗವಾಗಿ ಏರುತ್ತದೆ.
ಕಣ್ಣುಗಳು ಕೆಂಪಾಗುತ್ತವೆ.
ತೆಳು ಗುಲಾಬಿ ದದ್ದು ಮುಖದ ಮೇಲೆ ಕಾಣುತ್ತದೆ ನಂತರ ಕಣ್ಮರೆಯಾಗುತ್ತದೆ.
ಕುತ್ತಿಗೆ ಮತ್ತು ತೊಡೆ ಸಂದು ದುಗ್ಧರಸ ಗ್ರಂಥಿಗಳು ಹೆಚ್ಚಾಗಿ ಊದಿಕೊಳ್ಳುತ್ತವೆ.
ಅಧಿಕ ಜ್ವರ ಹಾಗೂ ಇತರ ಲಕ್ಷಣಗಳು ಎರಡರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ನಂತರ ಬೆವರುವಿಕೆ ಜಾಸ್ತಿಯಾಗುತ್ತದೆ.
ಮೂರು ನಾಲ್ಕು ದಿನಗಳ ನಂತರ ದೇಹದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.
ಏನು ಮಾಡಬೇಕು :
ಲಕ್ಷಣಗಳನ್ನು ಕಂಡು ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಸೊಳ್ಳೆಗಳ ನಿಯಂತ್ರಣ ಅಗತ್ಯ.
ವಿಶ್ರಾಂತಿ ಮತ್ತು ದ್ರವ ಸೇವನೆ ಅಗತ್ಯ.
ಪಪ್ಪಾಯ ಎಲೆಯ ರಸವನ್ನು ಸೇವಿಸಿ.

ಸಾಮಾನ್ಯವಾಗಿ ಒಂದು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಆದರೆ ಕೆಲವು ಸಂದರ್ಭಗಳಲ್ಲಿ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತದೆ. ಇದನ್ನು ಹೆಮರೇಜಿಕ ಜ್ವರ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದರಲ್ಲಿ ರಕ್ತನಾಳಗಳು ಹಾನಿಗೊಳಗಾಗಿ ಸ್ರವಿಕೆ ಆಗುತ್ತದೆ. ಪ್ಲೇಟ್ಲೆಟ್ ಸಂಖ್ಯೆಯು ತುಂಬಾ ಕಡಿಮೆಯಾಗುತ್ತದೆ. ಇದು ಆಂತರಿಕ ರಕ್ತಸ್ರಾವ, ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ತೀವ್ರವಾದ ಡೆಂಗ್ಯೂ ಜ್ವರದ ಎಚ್ಚರಿಕೆಯ ಲಕ್ಷಣಗಳು
ತೀವ್ರ ಹೊಟ್ಟೆ ನೋವು.
ನಿರಂತರ ವಾಂತಿ.
ವಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ.
ಮೂತ್ರದಲ್ಲಿ ರಕ್ತ ಚರ್ಮದಡಿಯಲ್ಲಿ ರಕ್ತಸ್ರಾವ.
ತ್ವರಿತ ಅಥವಾ ಕಷ್ಟವಾದ ಉಸಿರಾಟ.
ತೀವ್ರ ಆಯಾಸ.
ಜ್ವರ ಬಂದಾಗ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.






