ಬೆಳ್ಮಣ್‌ : ಬೈಕ್‌ಗೆ ಕಾರು ಡಿಕ್ಕಿ – ಸವಾರ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ಗೆ ಕಾರು ಡಿಕ್ಕಿಯಾಗಿ ಸವಾರ ಆಸ್ಪತ್ರೆ ದಾಖಲಾದ ಘಟನೆ ಆ. 20ರಂದು ಸಂಭವಿಸಿದೆ. ಬೆಳ್ಮಣ್‌ ಗ್ರಾಮದ ರಾಜೇಶ್‌ ಎಂಬವರು ಮಂಗಳೂರಿನಿಂದ ಪಡುಬಿದ್ರೆಯಾಗಿ ರಾಜ್ಯ ಹೆದ್ದಾರಿಯಲ್ಲಿ ಬೆಳ್ಮಣ್ ಕಡೆಗೆ ಬೈಕ್‌ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಪೆರಾಲ್‌ಪಾದೆ ಹತ್ತಿರ ರಾಜೇಶ್ ಅವರ ಹಿಂದಿನಿಂದ ಅಂದರೆ ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಸುದರ್ಶನ್ ಎಂಬವರು ಕಾರು ಚಲಾಯಿಸಿಕೊಂಡು ಬರುತ್ತಿದ್ದು, ರಾಜೇಶ್‌ ಅವರ ಬೈಕ್‌ನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಬೈಕ್ ಸಮೇತ ರಾಜೇಶ್‌ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಚಿಕಿತ್ಸೆಗಾಗಿ ಕಾರ್ಕಳ ಡಾ.ಟಿ.ಎಂ.ಎ.ಪೈ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top