ಸ್ವಚ್ಛತಾ ರಾಯಭಾರಿಗೆ ಅಡ್ಡಿಯಾಗದ ಅಂಗವೈಕಲ್ಯ

ಕಾರ್ಕಳ : ಮೊದಲು ಮನೆ, ಅನಂತರ ವಠಾರ, ಆ ಬಳಿಕ ಸಮಾಜದ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛ ಹಾಗೂ ಆರೋಗ್ಯವಂತ ಸಮಾಜದ ಪರಿಕಲ್ಪನೆಯನ್ನು ಕಂಡವರು ನಿಟ್ಟೆ ಗ್ರಾಮದ ಕಲಂಬಾಡಿ ಪದವು ನಿವಾಸಿ ನೀಲಾಧರ್ ಶೆಟ್ಟಿಗಾರ್. ಇವರು 10 ವರ್ಷಗಳ ಹಿಂದೆ ಬಾವಿ ಕೆಲಸ ಮಾಡುವಾಗ ಆಯ ತಪ್ಪಿ ಬಿದ್ದು ಬೆನ್ನು ಮೂಳೆ ಹಾಗೂ ಕಾಲಿನ ಮೂಳೆಗೆ ಪೆಟ್ಟಾಗಿದ್ದು ಅಂಗವೈಕಲ್ಯಗೊಂಡಿರುತ್ತಾರೆ. ಆದರೆ ಇವರ ಅಂಗವೈಕಲ್ಯ ಸ್ವಚ್ಛತಾ ಕಾರ್ಯಕ್ಕೆ ಅಡ್ಡಿಯಾಗಿಲ್ಲ. ಕಸ ಸಂಗ್ರಹದಿಂದ ಬಂದ ಆದಾಯದಿಂದಲೇ ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಸಿಗುವ ಅಲ್ಪ ಆದಾಯದಿಂದ ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ನೀಲಾಧರ್‌ ಅವರು ಕಸ ಸಂಗ್ರಹಕ್ಕಾಗಿ ತ್ರಿಚಕ್ರ ವಾಹನ ಖರೀದಿಗೆ ಮುಂದಾಗಿದ್ದು ಆರ್ಥಿಕ ನೆರವಿಗಾಗಿ ಸಮಾಜದಲ್ಲಿ ವಿನಂತಿಸುತ್ತಿದ್ದಾರೆ.

ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತರಬೇತಿ ಪಡೆದಿದ್ದ ನೀಲಾಧರ್‌ ಶೆಟ್ಟಿಗಾರ್‌ ನಿಟ್ಟೆ ಗ್ರಾಮದ S.L.R.M. ಘಟಕದಲ್ಲಿ ಸ್ವಚ್ಛತಾ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ತಮ್ಮೂರಿನ ಸುತ್ತಮುತ್ತ ನಡೆಯುವ ಯಾವುದೇ ಸಮಾರಂಭವಿರಲಿ ಅಥವಾ ಸ್ವಚ್ಚತಾ ಕಾರ್ಯಕ್ರಮವಿರಲಿ ತಾವು ಸ್ವತಃ ಮುಂಚೂಣಿಯಲ್ಲಿ ನಿಂತು ತ್ಯಾಜ್ಯ ವಸ್ತುಗಳು ಹಾಗೂ ಕಸವನ್ನು ವಿಲೇವಾರಿ ಮಾಡುವ ಮೂಲಕ ಮಾದರಿ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ದಾರೆ. ಕಸ ಸಂಗ್ರಹದಿಂದ ಬಂದ ಆದಾಯದಿಂದಲೇ ಸ್ವಾವಲಂಬಿ ಜೀವನ ನಡೆಸುತ್ತಿರುವ ಇವರು ಪ್ರಸ್ತುತ ದ್ವಿಚಕ್ರ ವಾಹನದ ಮೂಲಕ ಕಸ ಸಂಗ್ರಹಿಸುತ್ತಿದ್ದಾರೆ. ಆದರೆ ಇದರಿಂದ ಜೀವನ ನಡೆಸಲು ಕಷ್ಟವಾಗುತ್ತಿದ್ದು, ತಿಚಕ್ರ ವಾಹನದ ಅಗತ್ಯವಿದೆ. ವಾಹನ ಖರೀದಿಗೆ ಸಹಾಯ ಮಾಡುವಂತೆ ನೀಲಾಧ‌ರ್ ಶೆಟ್ಟಿಗಾರ್ ಅವರು ಪ್ರಕಟನೆಯ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Name : Neeladhara Shettigar
Bank Name: Union Bank of India
Branch : Doopadakatte
A/c No. : 520191032159613
IFSC : UBIN0902454
MICR : 576026007
Google pay No : 9632532186
contact Number : 9632532186





























































































































error: Content is protected !!
Scroll to Top