ನಿಟ್ಟೆ – ವಿದ್ಯುತ್‌ ತಂತಿ ಸ್ಪರ್ಶಿಸಿ ದನಗಳು ಸಾವು

ಕಾರ್ಕಳ : ನಿಟ್ಟೆ ಗ್ರಾಮದ ಪಾರೊಟ್ಟು ಎಂಬಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಎರಡು ದನಗಳು ಸಾವೀಗೀಡಾದ ಘಟನೆ ಆ. 3ರ ಬೆಳಿಗ್ಗೆ ಸಂಭವಿಸಿದೆ. ಪಾರೊಟ್ಟು ನಿವಾಸಿ ಸುಜಾತ ಅವರ 2 ದನಗಳು ಬಯಲಿನಲ್ಲಿ ಮೇಯುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಎಇ ಸುಧೀಂದ್ರ, ಎಇಇ ವಿನಯ ಕಾಮತ್‌, ಪಶು ಇಲಾಖೆ ವೈದ್ಯಾಧಿಕಾರಿ ಡಾ. ಅರುಣ್, ಗ್ರಾ. ಪಂ. ಸದಸ್ಯ ಸತೀಶ್‌, ರಶ್ಮಿ ಶೆಟ್ಟಿ, ಗ್ರಾಮ ಕರಣಿಕ ಸುಖೇಶ್ ಆಗಮಿಸಿ ಪರಿಶೀಲನೆ ನಡೆಸಿದರು.





























































































































error: Content is protected !!
Scroll to Top