ಪ್ಯಾರಿಸ್ ಒಲಿಂಪಿಕ್ಸ್ನ ಶೂಟಿಂಗ್ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಪದಕ ಗೆಲ್ಲುವ ಮನು ಭಾಕರ್ ಅವರ ಕನಸು ಕಮರಿದೆ. ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆರಂಭದಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕ ಕೈ ತಪ್ಪಿತು. ಫೈನಲ್ ಸುತ್ತಿನ ಆರಂಭದಲ್ಲಿ ಮುನ್ನಡೆ ಪಡೆದಿದ್ದ ಮನು, ಎಲಿಮಿನೇಷನ್ ಸುತ್ತಿನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಫೈನಲ್ನಲ್ಲಿ ಮನು ಭಾಕರ್ 28 ಅಂಕಗಳೊಂದಿಗೆ 4ನೇ ಸ್ಥಾನ ಪಡೆದರೆ, ಕಂಚಿನ ಪದಕ ಗೆದ್ದ ಹಂಗೇರಿಯಾದ ಮೇಜರ್ ವೆರೋನಿಕಾ 31 ಪಾಯಿಂಟ್ಸ್ ಕಲೆಹಾಕಿದ್ದರು. ಕೇವಲ ಮೂರು ಅಂಕಗಳ ಅಂತರದಿಂದ ಮೂರನೇ ಪದಕ ಗೆಲ್ಲುವ ಅವಕಾಶವನ್ನು ಮನು ಭಾಕರ್ ಕೈಚೆಲ್ಲಿಕೊಂಡರು.
ಮಹಿಳಾ 25 ಮೀಟರ್ ಪಿಸ್ತೂಲ್ ಫೈನಲ್ ಸ್ಪರ್ಧೆಯ ಫಲಿತಾಂಶ
ಜಿ ಯಾಂಗ್ (ಸೌತ್ ಕೊರಿಯ)- 37 ಅಂಕಗಳು
ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ (ಫ್ರಾನ್ಸ್)- 37 ಅಂಕಗಳು
ಮೇಜರ್ ವೆರೋನಿಕಾ (ಹಂಗೇರಿ)- 31 ಅಂಕಗಳು
ಮನು ಭಾಕರ್ (ಭಾರತ)- 28 ಅಂಕಗಳು






























































