ಯೆಮೆನ್ ಬಂದರಿಗೆ ತೈಲ ಸಾಗಿಸುತ್ತಿದ್ದ ಹಡಗು
ಹೊಸದಿಲ್ಲಿ : ತೈಲ ಸಾಗಿಸುತ್ತಿದ್ದ ಹಡಗೊಂದು ಓಮಾನ್ ದೇಶದ ಕರಾವಳಿ ಸಮೀಪ ಮುಳುಗಡೆಯಾಗಿ ಅದರಲ್ಲಿದ್ದ 13 ಭಾರತೀಯರ ಸಹಿತ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಓಮಾನಿನ ದುಖ್ಮ್ ಬಂದರಿನ ಸಮೀಪದ ರಾಸ್ ಮದ್ರಖ ಕರಾವಳಿಯಿಂದ 25 ನಾಟಿಕಲ್ ಮೈಲು ದೂರದಲ್ಲಿ ಹಡಗು ಮುಳುಗಿದೆ. ಹಡಗಿನಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದ ಮೂವರು ನಾವಿಕ ಸಿಬ್ಬಂದಿ ಇದ್ದರು. ಅವರನ್ನು ಹುಡುಕುವ ಕಾರ್ಯಾಚರಣೆ ಪ್ರಾರಂಭವಾಗಿದ್ದರೂ ಇಷ್ಟರ ತನಕ ಯಾವುದೇ ಫಲ ಕಂಡಿಲ್ಲ.
ಕೊಮೊರಸ್‌ನಲ್ಲಿ ನೋಂದಣಿಯಾಗಿರುವ ಪ್ರೆಸ್ಟೀಜ್ ಫಾಲ್ಕನ್ ಎಂಬ ಈ ಹಡಗು ಏಡೆನ್‌ನ ಯೆಮೆನ್ ಬಂದರಿಗೆ ಹೋಗುತ್ತಿರುವಾಗ ದುರಂತ ಸಂಭವಿಸಿದೆ. ಹಡಗಿನಲ್ಲಿ 117 ಮೀಟರ್ ಉದ್ದದ ಟ್ಯಾಂಕರ್ ಇತ್ತು ಎಂದು ಮೂಲಗಳು ತಿಳಿಸಿವೆ.



















