ಉತ್ತರ ಕನ್ನಡ : ಎಲ್ಪಿಜಿ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಬಿದ್ದಿರುವ ದುರ್ಘಟನೆ ನಡೆದಿದೆ. ಗುಡ್ಡ ಕುಸಿತದ ರಭಸಕ್ಕೆ ಟ್ಯಾಂಕರ್ ನದಿಗೆ ಬಿದ್ದಿದೆ. ಹೆದ್ದಾರಿ ಪಕ್ಕದ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಐದಾರು ಜನ ನಾಪತ್ತೆಯಾಗಿದ್ದಾರೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆಯು ವ್ಯಕ್ತವಾಗಿದೆ. ನದಿಯಲ್ಲಿ ತೇಲಿ ಹೋಗಿರಬಹುದೂ ಎಂಬ ಅನುಮಾನವು ಇದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದಾಗಿದೆ. ಜಿಲ್ಲಾಡಳಿತದಿಂದ ಹೆದ್ದಾರಿ ಮೇಲಿನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ.
ಶಿರೂರಿನಲ್ಲಿ ಗುಡ್ಡ ಕುಸಿದು ಎಲ್ಪಿಜಿ ಟ್ಯಾಂಕರ್ ಮೇಲೆ ಬಿದ್ದು ಐದಾರು ಜನ ನಾಪತ್ತೆ






























































