ಶಿರ್ಲಾಲು : ಗಾಳಿ ಮಳೆಗೆ ವಿದ್ಯುತ್‌ ತಂತಿಗೆ ಬಿದ್ದ ಮರ

ಕಾರ್ಕಳ : ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಶಿರ್ಲಾಲಿನಲ್ಲಿ ವಿದ್ಯುತ್‌ ತಂತಿಗಳಿಗೆ ಮರ ಬಿದ್ದು ವಿದ್ಯುತ್‌ ಸ್ಥಗಿತಗೊಂಡಿದೆ. ಜೂ. 24 ರ ರಾತ್ರಿ ಶಿರ್ಲಾಲು ಅಜೆಕಾರು ಸಾಗುವ ರಸ್ತೆಯಲ್ಲಿ ಹಾಡಿಯಂಗಡಿ ಪೋಸ್ಟ್‌ ಆಫೀಸ್‌ ಬಳಿ ಮತ್ತು ಸುರೆಂತೊಕ್ಲು ಶಾಲೆಯ ಸಮೀಪ ವಿದ್ಯುತ್‌ ತಂತಿಗೆ ಮರ ಬಿದ್ದಿದೆ. ಪರಿಣಾಮವಾಗಿ ಶಿರ್ಲಾಲಿನಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಅರಣ್ಯ ಇಲಾಖೆಯ ಸಹಾಯದೊಂದಿಗೆ ಶೀಘ್ರವೇ ಮರ ತೆರವುಗೊಳಿಸಿ ವಿದ್ಯುತ್‌ ಸರಿಪಡಿಸುವ ಕಾರ್ಯ ಮಾಡಲಾಗುವುದು ಎಂದು ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.





























































































































error: Content is protected !!
Scroll to Top