ಕೆಮ್ಮಣ್ದ ನೇಮೋತ್ಸವ ಭಕ್ತಗೀತೆ ಬಿಡುಗಡೆ

ಕಾರ್ಕಳ: ಮೆಲೋಡಿ ಮ್ಯೂಸಿಕಲ್ಸ್ ನಿಟ್ಟೆ ಕಾರ್ಕಳ ತಂಡದಿಂದ ಶ್ರೀ ಧೂಮವತಿ ದೈವಸ್ಥಾನ ಕೆಮ್ಮಣ್ಣು ನಿಟ್ಟೆ ಇಲ್ಲಿನ ಕೆಮ್ಮಣ್ದ ನೇಮೋತ್ಸವ ಎಂಬ ತುಳು ಭಕ್ತಿಗೀತೆ ಜೂ.23ರಂದು ನವದುರ್ಗ ಫ್ರೆಂಡ್ಸ್ ಕೆಮ್ಮಣ್ಣು, ನಿಟ್ಟೆ ಇವರು ಆಯೋಜಿಸಿದ ಕೆಸರುಡೊಂಜಿ ದಿನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಅತಿಥಿಗಳಾದ ದೈವ ನರ್ತಕ ಮಾಧವ ಬಂಗೇರ, ಉದ್ಯಮಿ ನಿತಿನ್ ಹೆಗ್ಡೆ, ಗೋಪಾಲ್ ಶೆಟ್ಟಿ, ಯತೀನ್ ಶೆಟ್ಟಿ, ಸಂತೋಷ್ ಶೆಟ್ಟಿ, ಆಶಿಕ್ ಬೊಂಟ್ರ, ಸಂಘದ ಅಧ್ಯಕ್ಷ ಶೈಲೇಶ್ ಸುವರ್ಣ ಬಿಡುಗಡೆಗೊಳಿಸಿದರು.
ಈ ಹಾಡಿಗೆ ಉತ್ತಮ ಸಾಹಿತ್ಯವನ್ನು ನಾಗ ನಿರೆಲ್ ಹಾಗೂ ದೈವದೃಷ್ಟಿ ನಾಟಕ ಖ್ಯಾತಿಯ ಸುಂದರ್ ದೇವಾಡಿಗ ಕೆಮ್ಮಣ್ಣು ಬರೆದಿದ್ದು, ಪ್ರದೀಪ್ ಆಚಾರ್ಯ ಕೆಮ್ಮಣ್ಣು ಹಾಗೂ ವೈಷ್ಣವಿ ಪಿ.ಭಟ್ ನೆಲ್ಲಿತೀರ್ಥ ಧ್ವನಿ ನೀಡಿರುತ್ತಾರೆ. ಚಿತ್ರೀಕರಣ ಹಾಗೂ ಸಂಕಲನವನ್ನು 7ಡಿ ಸಂತು ಮಾಡಿದ್ದು, ರೆಕಾರ್ಡಿಂಗ್ ಹಾಗೂ ಪ್ರಚಾರ ಕಲೆಯನ್ನು ಸಂತೋಷ್ ಪುಚ್ಚೆರ್ ಮಾಡಿರುತ್ತಾರೆ. ಈ ಹಾಡಿನ ನಿರ್ಮಾಣವನ್ನು ಅಕ್ಷಯ್ ಭಟ್ ಕೊಪ್ಪಳ ಮನೆ ಕೆಮ್ಮಣ್ಣು, ಸೂರತ್ ಪೂಜಾರಿ ಕೆಮ್ಮಣ್ಣು, ಪವನ್ ಕೋಟ್ಯಾನ್ ಹಾಗೂ ಬಾಲಕೃಷ್ಣ ಪೂಜಾರಿ ನಿರ್ಮಿಸಿದ್ದು, ಈ ಹಾಡು ಮೆಲೊಡಿ ಮ್ಯೂಸಿಕಲ್ಸ್‌ ಪ್ರದೀಪ್‌ ಆಚಾರ್ಯ ಯೂ ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ.



























































































































error: Content is protected !!
Scroll to Top