ಈಜಿ ವರಂಗ ಕೆರೆಬಸದಿಗೆ ಸಾಗಿದ ಯುವಕರು

ಕಾರ್ಕಳ : ವರಂಗ ಕೆರೆ ಬಸದಿಯಲ್ಲಿ ಈಜಲು ತೆರಳಿದ ಯುವಕರಿಬ್ಬರು ದಡ ಸೇರಲು ಪರದಾಟ ನಡೆಸಿದ ಘಟನೆ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಹೆಬ್ರಿ ತಾಲೂಕು ವರಂಗ ಗ್ರಾಮದಲ್ಲಿನ ಕೆರೆ ಬಸದಿಗೆ ಶನಿವಾರ ಮಧ್ಯಾಹ್ನ ಬೆಂಗಳೂರು ಕಡೆಯ ತಂಡವೊಂದು ಆಗಮಿಸಿತ್ತು. ಅವರ ಪೈಕಿ ಇಬ್ಬರು ಯುವಕರು ಕೆರೆಗೆ ಇಳಿದು 70 ಮೀಟರ್‌ ದೂರದಲ್ಲಿರುವ ಬಸದಿಯತ್ತ ಸಾಗಿದ್ದರು. ಈ ಮಧ್ಯೆ ಸುಸ್ತಾದ ಯುವಕರು ಈಜಲು ಸಾಧ್ಯವಾಗದೇ ಕೆರೆ ಮಧ್ಯದಲ್ಲಿ ಜೀವ ಕೈಯಲ್ಲಿಟ್ಟುಕೊಂಡು ರಕ್ಷಣೆಗಾಗಿ ಕೂಗಿರುತ್ತಾರೆ. ಇದನ್ನು ಗಮನಿಸುತ್ತಿದ್ದ ದಡದಲ್ಲಿದ್ದ ಅವರ ಗೆಳೆಯರು ಲೈಫ್ ಜಾಕೆಟ್‌ ನೀಡಿ ಜೀವ ಉಳಿಸಿದ್ದಾರೆ. ಈ ಮೂಲಕ ನೀರು ಪಾಲಾಗಲಿದ್ದ ಇಬ್ಬರ ರಕ್ಷಣೆ ಮಾಡಿರುತ್ತಾರೆ.

ದೋಣಿಯಿದೆ
ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಈ ಕೆರೆಯಲ್ಲಿ ಬಸದಿ ಸಂಪರ್ಕಿಸಲು ದೋಣಿ ಸೌಲಭ್ಯವಿದೆ. ದೋಣಿಯ ನಾವಿಕರಿಲ್ಲದ ಸಂದರ್ಭ ಯುವಕರು ನೀರಿಗಿಳಿದಿರುತ್ತಾರೆ. ಮಠದ ಆವರಣ ಸೇರಿದಂತೆ ಹಲವೆಡೆ ಸೂಚನಾ ಫಲಕಗಳನ್ನು ಹಾಕಲಾಗಿದ್ದರೂ ಬೇಜವಾಬ್ದಾರಿ ತೋರುವ ಇಂತಹವರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









































































































error: Content is protected !!
Scroll to Top