ಕಾಂಗ್ರೆಸ್‌ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕನ ಫೋಟೋ

ಉಡುಪಿ : ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ದೊಡ್ಡ ಎಡವಟ್ಟು ಕಂಡು ಬಂದಿದ್ದು, ಕಾಂಗ್ರೆಸ್ ನಾಯಕನ ಫೋಟೋ ಬದಲಾಗಿ ಬಿಜೆಪಿ ನಾಯಕ ಭಾವಚಿತ್ರ ಮುದ್ರಿಸಲ್ಪಟ್ಟಿದೆ.

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಬದಲು ಬಿಜೆಪಿ ಮಂಗಳೂರು ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ ಅವರ ಭಾವಚಿತ್ರವನ್ನು ಮುದ್ರಿಸಿದೆ. ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಕೆ.ಕೆ. ಮಂಜುನಾಥ್ ಕುಮಾ‌ರ್ ಅವರ ಚುನಾವಣಾ ಪ್ರಚಾರ ಪತ್ರದಲ್ಲಿ ಈ ಎಡವಟ್ಟು ಕಂಡು ಬಂದಿದ್ದು ಚರ್ಚೆಗೆ ಗ್ರಾಸವಾಗಿದೆ.
ಆರು ಪುಟಗಳ ಪ್ರಚಾರ ಪತ್ರದ ಐದನೇ ಪುಟದಲ್ಲಿ ಎಲ್ಲಾ ನಾಯಕರ ಫೋಟೋಗಳ ಮಧ್ಯೆ ಬಿಜೆಪಿ ಉದಯಕುಮಾರ್ ಶೆಟ್ಟಿ ಅವರ ಫೋಟೋ ಕೂಡ ರಾರಾಜಿಸುತ್ತಿದೆ. ಈಗಾಗಲೇ ಸಾವಿರಾರು ಪ್ರಚಾರ ಪತ್ರಗಳನ್ನು ಮುದ್ರಿಸಿ ಹಂಚಲಾಗಿದೆ.





























































































































error: Content is protected !!
Scroll to Top