ಆರೋಗ್ಯಧಾರ : ಪಿತ್ತಕೋಶದ ಕಲ್ಲು

ಯಕೃತ್ತಿನ ಕೆಳಗೆ ಹಿಂದಿನ ಭಾಗದಲ್ಲಿ ಪಿತ್ತಕೋಶವು ಸ್ಥಿತವಾಗಿದೆ. ಪಿತ್ತಕೋಶದಿಂದ ಸ್ರವಿಸುವ ರಸವು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. 40 ವರ್ಷ ದಾಟಿದ ವ್ಯಕ್ತಿಗಳಲ್ಲಿ ಪಿತ್ತಕೋಶದ ಕಲ್ಲುಗಳಾಗುವ ಸಂಭವವಿರುತ್ತದೆ ವಿಶೇಷವಾಗಿ ಮಹಿಳೆಯರಲ್ಲಿ ಕಂಡು ಬರುವುದು.

ಇದರ ಕಾರಣಗಳು
ಆಯುರ್ವೇದದ ಪ್ರಕಾರ ವಾತ ಪಿತ್ತ ಹಾಗೂ ಕಫ ದೋಷದಿಂದ ವಿಶೇಷವಾಗಿ ಪಿತ್ತದೋಷದ ವಿಕೃತಿಯಿಂದ ಕಲ್ಲುಗಳು ರೂಪಗೊಳ್ಳುತ್ತದೆ. ಇದನ್ನು ಪಿತ್ತಾಶ್ಮರಿ ಎಂದು ಕರೆಯುತ್ತಾರೆ. ಪಿತ್ತಕೋಶದಲ್ಲಿ ಸಂಗ್ರಹವಾಗಿರುವ ಪಿತ್ತ ರಸವು ಕಲ್ಲಿನಂತಾಗಿ ಪಿತ್ತ ಗಲ್ಲುಗಳಾಗಿ ರೂಪಗೊಳ್ಳುತ್ತದೆ. ಹೆಚ್ಚು ಕೊಲೆಸ್ಟ್ರಾಲ್, ಪಿತ್ತ ರಸ ಲವಣಗಳು ಹಾಗೂ ಬಿಲಿರುಬಿನ ಪಿತ್ತಗಲ್ಲುಗಳಿಗೆ ಕಾರಣ.
ಅಸಮತೋಲನ ಆಹಾರ, ಅನಾರೋಗ್ಯಕರ ಜೀವನ ಶೈಲಿ ಇದಕ್ಕೆ ಪ್ರಮುಖ ಕಾರಣಗಳು. ಕೊಬ್ಬಿನ ಆಹಾರ, ಜಂಕ್ ಫುಡ್ ನ ಅತಿ ಸೇವನೆ, ಅನಿಯಮಿತ ಆಹಾರ, ದೈಹಿಕ ಶ್ರಮವಿಲ್ಲದ ಜೀವನ ಶೈಲಿ.

ಲಕ್ಷಣಗಳು
ವಾಂತಿ, ವಾಕರಿಕೆ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ಹೊಟ್ಟೆ ಉಬ್ಬುವುದು, ಕೆಲವೊಮ್ಮೆ ಕಾಮಲೆ ರೋಗವನ್ನು ಉದ್ಭವಿಸಬಹುದು.
ಇದನ್ನು ಹೇಗೆ ತಡೆಗಟ್ಟಬಹುದು-
ಆರೋಗ್ಯಕರ ಆಹಾರ ಹಾಗೂ ಜೀವನ ಶೈಲಿಯ ಬದಲಾವಣೆಯಿಂದ ಇದನ್ನು ತಡೆಗಟ್ಟಬಹುದು.

ಪಥ್ಯ-
ಯಥೇಚ್ಛ ನೀರಿನ ಸೇವನೆ, ಬಾರ್ಲಿ ನೀರು, ಎಳನೀರು, ಹುರುಳಿ, ಹೆಸರು ಕಾಳು, ಹಳೆಯ ಅಕ್ಕಿ, ಗೋದಿ, ನವಣೆ, ನುಗ್ಗಿ ಸೊಪ್ಪು, ಬೂದುಗುಂಬಳಕಾಯಿ, ದಾಳಿಂಬೆ, ಕಿತ್ತಳೆ, ನಿಂಬೆಹಣ್ಣು, ಮೋಸಂಬಿ, ನೆಲಗಡಲೆ, ಬಾದಾಮಿ, ಅರಿಶಿನ, ಓಂಕಳು.

ಅಪಥ್ಯ –
ಉದ್ದಿನ ಬೇಳೆ, ಉಪ್ಪು, ಟೊಮೆಟೊ, ಪಾಲಕ್, ಬದನೆಕಾಯಿ, ಖಾರ ಪದಾರ್ಥ, ಜಂಕ್ ಫುಡ್, ಕೋಲ್ಡ್ ಡ್ರಿಂಕ್ಸ್, ಐಸ್ ಕ್ರೀಮ್, ಕರಿದ ಪದಾರ್ಥ. ಹಾಲಿನ ಉತ್ಪನ್ನವನ್ನು ಮಿತವಾಗಿ ಸೇವಿಸಿ.
ಪಿತ್ತಶ್ಮರಿಯನ್ನು ತಡೆಗಟ್ಟಲು ಈ ಯೋಗಾಸನಗಳನ್ನು ಮಾಡಿರಿ. ವಕ್ರಾಸನ, ಭುಜಂಗಾಸನ, ಚಕ್ರಾಸನ, ಸರ್ವಾಂಗಾಸನ, ಹಾಲಾಸನ, ಪವನಮುಕ್ತಾಸನ, ತ್ರಿಕೋಣಸನ, ಶಲಭಾಸನ, ಧನುರಾಸನ. ದಿನಾಲು ನಡಿಗೆ, ಧ್ಯಾನ, ಪ್ರಾಣಾಯಾಮಗಳನ್ನು ರೂಡಿಸಿಕೊಳ್ಳಿ. ಕ್ರೀಯಾಶೀಲರಾಗಿರಿ.
ಚಿಕಿತ್ಸೆ – ಪಂಚಕರ್ಮದಲ್ಲಿ ವಿರೇಚನ ಉಪಯೋಗವಾಗುತ್ತದೆ.
ಆಯುರ್ವೇದ ಔಷಧಗಳು – ಶಂಕ ವಟಿ, ಅವಿಪತ್ತಿಕರ ಚೂರ್ಣ, ಹಿಂಗ್ವಾಷ್ಟಕ ಚೂರ್ಣ, ಆರೋಗ್ಯ ವರ್ಧಿನಿ ವಟಿ, ಮಾದಿಫಲಾದಿ ರಸಾಯನ, ಮುಂತಾದವುಗಳು.





















































































































































error: Content is protected !!
Scroll to Top