ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷವಾದ್ರೂ ಅಭಿವೃದ್ಧಿ ಶೂನ್ಯ – ಸುನಿಲ್‌ ಕುಮಾರ್‌

ಬೆಂಗಳೂರು : ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷವಾದ್ರೂ ಅಭಿವೃದ್ಧಿ ಶೂನ್ಯ. ಯಾವ ಯೋಜನೆಗಳಿಗೆ ಎಷ್ಟು ಅನುದಾನವೆಂದು ಬಿಡುಗಡೆ ಮಾಡಲಿ. ಶಾಸಕರು ಒಂದು ವರ್ಷದಿಂದ ಒಂದೂ ಗುದ್ದಲಿ ಪೂಜೆ ಮಾಡಲು ಆಗಿಲ್ಲ. ಇಡೀ ಸಚಿವ ಸಂಪುಟವೇ ಅಸಮರ್ಥ ಸಂಪುಟ. ಸಚಿವರ ಮೇಲೆ ಹಿಡಿತ ಇಲ್ಲದ ಸಿಎಂ ಆಡಳಿತ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್ ಕುಮಾರ್ ಕಿಡಿಕಾರಿದರು.
ಅವರು ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕರ್ನಾಟಕ ಕಾಂಗ್ರೆಸ್ ಸರಕಾರ ಅಲುಗಾಡಿಸುವ ಬಗ್ಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಡಿರುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್, ಬಹುಮತ ಇರುವ ಸರಕಾರವನ್ನ ಬಿಜೆಪಿ ಅಭದ್ರ ಮಾಡಲ್ಲ. ಆದರೆ, ಕಾಂಗ್ರೆಸ್ ನಾಯಕತ್ವದಲ್ಲಿನ ಗೊಂದಲದ ಭಾರಕ್ಕೆ ಅವರೇ ಕುಸಿದು ಬಿದ್ದರೆ ಆಮೇಲೆ ನಾವು ನೋಡುತ್ತೇವೆ. ನಾವು ಯಾವುದೇ ಕಾರಣಕ್ಕೂ ಸರಕಾರ ಅಭದ್ರ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಬಹಳ ಶಾಸಕರು ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಅವರ ಶಾಸಕರೇ ಮಾತನಾಡುತ್ತಿದ್ದಾರೆ. ಯಾರ ಭಾರದಿಂದ ಸರಕಾರ ಕುಸಿಯುತ್ತೋ ನೋಡೋಣ. ಸರಕಾರ ಡಿಸಿಎಂ ಡಿಕೆ ಅವರ ಭಾರದಿಂದ ಕುಸಿಯುತ್ತೋ? ಸಿಎಂ ಭಾರದಿಂದ ಕುಸಿಯುತ್ತೋ ಬಿಜೆಪಿ ಕಾದು ನೋಡುತ್ತೆ. ಸರಕಾರ ಅದರದ್ದೇ ಭಾರದಿಂದ ಕುಸಿದ್ರೆ ಸುಮ್ಮನೆ ಇರಬೇಕಾ? ವಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಂಡಿರಲು ಆಗುತ್ತಾ? ಎಂದ ಅವರು ಗ್ಯಾರಂಟಿ ಗುಂಗಿನಲ್ಲೇ ಇರದೇ ಜನರ ನಿರೀಕ್ಷೆಯಂತೆ ಕೆಲಸ ಮಾಡಿ ಎಂದು ಸರಕಾರಕ್ಕೆ ಸಲಹೆ ನೀಡಿದರು.





























































































































error: Content is protected !!
Scroll to Top