ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ – ಶೇ. 76.91 ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ : ಕರ್ನಾಟಕ ಸರಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ (94%) ಮೊದಲ ಸ್ಥಾನ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆ (92.12%) ಎರಡನೇ ಸ್ಥಾನ ಪಡೆದರೆ, ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಯಾದಗಿರಿ (50.59%) ಕೊನೆಯ ಸ್ಥಾನದಲ್ಲಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 631204 (ಶೇ.76.91) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ಅಂಕಿತಾ ಬಸಪ್ಪ ಮೊದಲನೇ (625 ಅಂಕ) ಸ್ಥಾನ ಗಳಿಸಿದ್ದಾರೆ. ಬೆಂಗಳೂರಿನ ಮೇದಾ ಪಿ. ಶೆಟ್ಟಿ ಎರಡನೇ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಸರಕಾರದದ ಎಸ್ಸೆಸೆಲ್ಸಿ ಪರೀಕ್ಷೆ 2024 ಮಾರ್ಚ್ 25 ರಿಂದ ಏಪ್ರಿಲ್ 6ರ ನಡುವೆ ನಡೆಯಿತು. ಈ ಬಾರಿ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 4.41 ಲಕ್ಷ ಬಾಲಕರು, 4.28 ಬಾಲಕಿಯರಿದ್ದರು. ಇದಲ್ಲದೆ, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಕೂಡ ಇವರಲ್ಲೇ ಸೇರಿಕೊಂಡು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು.

ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದು.

ಜಿಲ್ಲಾವಾರು ಫಲಿತಾಂಶ ಇಂತಿವೆ,

  • ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ (94%)
  • ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ (92.12%)
  • ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ (88.67%)
  • ಕೊಡಗು ಜಿಲ್ಲೆಗೆ ನಾಲ್ಕನೇ ಸ್ಥಾನ (88.67%)
  • ಉತ್ತರ ಕನ್ನಡ ಜಿಲ್ಲೆಗೆ ಐದನೇ ಸ್ಥಾನ (86.54%)
  • ಹಾಸನ ಜಿಲ್ಲೆಗೆ ಆರನೇ ಸ್ಥಾನ (86.28%)
  • ಮೈಸೂರು ಜಿಲ್ಲೆಗೆ ಏಳನೇ ಸ್ಥಾನ (85.5%)
  • ಶಿರಸಿ ಜಿಲ್ಲೆಗೆ ಎಂಟನೇ ಸ್ಥಾನ (84.64%)
  • ಬೆಂಗಳೂರು ಗ್ರಾ ಜಿಲ್ಲೆಗೆ ಒಂಬ್ತತೇ ಸ್ಥಾನ (83.67%)
  • ಚಿಕ್ಕಮಗಳೂರು ಜಿಲ್ಲೆಗೆ ಹತ್ತನೇ ಸ್ಥಾನ (83.39%)
  • ವಿಜಯಪುರ ಜಿಲ್ಲೆಗೆ 11ನೇ ಸ್ಥಾನ (79.82%)
  • ಬೆಂಗಳೂರು ದಕ್ಷಿಣ ಜಿಲ್ಲೆಗೆ 12ನೇ ಸ್ಥಾನ (79%)
  • ಬಾಗಲಕೋಟೆ ಜಿಲ್ಲೆಗೆ 13ನೇ ಸ್ಥಾನ (77.92%)
  • ಬೆಂಗಳೂರು ಉತ್ತರ ಜಿಲ್ಲೆಗೆ 14ನೇ ಸ್ಥಾನ (77.09%)
  • ಹಾವೇರಿ ಜಿಲ್ಲೆಗೆ 15ನೇ ಸ್ಥಾನ (75.85%)
  • ತುಮಕೂರು ಜಿಲ್ಲೆಗೆ 16ನೇ ಸ್ಥಾನ (75.16%)
  • ಗದಗ ಜಿಲ್ಲೆಗೆ 17ನೇ ಸ್ಥಾನ (74.76%)
  • ಚಿಕ್ಕಬಳ್ಳಾಪುರ ಜಿಲ್ಲೆಗೆ 18ನೇ ಸ್ಥಾನ (73.61%)
  • ಮಂಡ್ಯ ಜಿಲ್ಲೆಗೆ 19ನೇ ಸ್ಥಾನ (73.59%)
  • ಕೋಲಾರ ಜಿಲ್ಲೆಗೆ 20ನೇ ಸ್ಥಾನ (73.57%)
  • ಚಿತ್ರದುರ್ಗ ಜಿಲ್ಲೆಗೆ 21ನೇ ಸ್ಥಾನ (72.85%)
  • ಧಾರವಾಡ ಜಿಲ್ಲೆಗೆ 22ನೇ ಸ್ಥಾನ (72.67%)
  • ದಾವಣಗೆರೆ ಜಿಲ್ಲೆಗೆ 23ನೇ ಸ್ಥಾನ (72.49%)
  • ಚಾಮರಾಜನಗರ ಜಿಲ್ಲೆಗೆ 24ನೇ ಸ್ಥಾನ (71.59%)
  • ಚಿಕ್ಕೋಡಿ ಜಿಲ್ಲೆಗೆ 25ನೇ ಸ್ಥಾನ (69.82%)
  • ರಾಮನಗರ ಜಿಲ್ಲೆಗೆ 26ನೇ ಸ್ಥಾನ (69.53%)
  • ವಿಜಯನಗರ ಜಿಲ್ಲೆಗೆ 27ನೇ ಸ್ಥಾನ (65.61%)
  • ಬಳ್ಳಾರಿ ಜಿಲ್ಲೆಗೆ 28ನೇ ಸ್ಥಾನ ಸಿಕ್ಕಿದೆ (64.99%)
  • ಬೆಳಗಾವಿ ಜಿಲ್ಲೆಗೆ 29ನೇ ಸ್ಥಾನ (64.93%)
  • ಮಧುಗಿರಿ ಜಿಲ್ಲೆಗೆ 30ನೇ ಸ್ಥಾನ (62.44%)
  • ರಾಯಚೂರು ಜಿಲ್ಲೆಗೆ 31ನೇ ಸ್ಥಾನ (61.2%)
  • ಕೊಪ್ಪಳ ಜಿಲ್ಲೆಗೆ 32ನೇ ಸ್ಥಾನ (61.16%)
  • ಬೀದರ್ ಜಿಲ್ಲೆಗೆ 33ನೇ ಸ್ಥಾನ (57.52%)
  • ಕಲಬುರಗಿ ಜಿಲ್ಲೆಗೆ 34ನೇ ಸ್ಥಾನ (53.04%)ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ 50.59% ಸಿಕ್ಕಿದೆ














































error: Content is protected !!
Scroll to Top