ರಿಕ್ಷಾ ಡಿಕ್ಕಿ – ಬೈಕ್‌ ಸವಾರರಿಗೆ ಗಾಯ

ಕಾರ್ಕಳ : ಬೈಕ್‌ಗೆ ಆಟೋರಿಕ್ಷಾ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಮೇ 6ರಂದು ನಿಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ಲೆಮಿನಾ-ಬೋರ್ಗಲ್ ಗುಡ್ಡೆ ರಸ್ತೆಯಲ್ಲಿ ಆಟೋರಿಕ್ಷಾವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಲೆಮಿನಾ ಕಡೆಯಿಂದ ಬೋರ್ಗಲ್ ಗುಡ್ಡೆ ಕಡೆಗೆ ರಾಘವೇಂದ್ರ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಬೈಕ್ ಸವಾರ ರಾಘವೇಂದ್ರ ಮತ್ತು ಸಹಸವಾರ ಅವರ ಮಗ ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಗಳು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top