ಸ್ಕೂಟರ್‌ಗೆ ಕಾರು ಡಿಕ್ಕಿ – ಶಿಕ್ಷಕಿಗೆ ಗಾಯ

ಕಾರ್ಕಳ : ಶಿಕ್ಷಕಿಯೋರ್ವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಶಿಕ್ಷಕಿ ಗಾಯಗೊಂಡ ಘಟನೆ ಮೇ 6ರಂದು ಅಯ್ಯಪ್ಪನಗರದಲ್ಲಿ ಸಂಭವಿಸಿದೆ. ಜೆಸಿಸ್ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕಿ ಶಿಲ್ಪಾ ಗಾಯಗೊಂಡವರು. ಇವರು ಕರ್ತವ್ಯ ಮುಗಿಸಿ ಕುಕ್ಕುಂದೂರು ದೇವಿಕೃಪಾ ಸಭಾಭವನಕ್ಕೆ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಅಯ್ಯಪ್ಪನಗರದ ಬಳಿ ಜೋಡುರಸ್ತೆಯಿಂದ ಬೈಲೂರು ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ಸಾಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಶಿಲ್ಪಾ ಅವರು ಗಾಯಗೊಂಡಿದ್ದು ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top