7 ಕೆಜಿ ಚಿನ್ನದಿಂದ ತಯಾರಿಸಿದ ಪುಸ್ತಕ
ಅಯೋಧ್ಯೆ : ಅಯೋದ್ಯೆ ಶ್ರೀ ರಾಮಜನ್ಮಭೂಮಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಬಹಳ ವಿಜೃಂಭಣೆಯಿಂದ ನಡೆದಿದೆ. ಇದೀಗ ಶ್ರೀರಾಮ ಮಂದಿರದಲ್ಲಿ ಈಗಾಗಲೇ ರಾಮನವಮಿ ಆಚರಣೆ ಪ್ರಾರಂಭವಾಗಿದೆ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ. ಈ ಶುಭ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರು ಬಾಲ ರಾಮನಿಗೆ ಸುವರ್ಣ ರಾಮಾಯಣವನ್ನು ಉಡುಗೊರೆಯಾಗಿ ನೀಡಿದ್ದಾರೆ. 7 ಕೆ.ಜಿ. ಚಿನ್ನವನ್ನು ಬಳಸಿ ಮಾಡಿದ ಚಿನ್ನದ ಪುಟಗಳಲ್ಲಿ ಬರೆದ ರಾಮಾಯಣವನ್ನು ರಾಮನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಲಕ್ಷ್ಮೀ ನಾರಾಯಣ್ ತಮ್ಮ ಇಡೀ ಜೀವಮಾನದ ಉಳಿತಾಯವನ್ನು ಬಾಲರಾಮನಿಗೆ ಅರ್ಪಿಸುವುದಾಗಿ ವಾಗ್ದಾನ ಮಾಡಿದ್ದರು.
ಸುಮಾರು 151 ಕೆಜಿ ತೂಕದ ‘ರಾಮಚರಿತ ಮಾನಸ’ ಪ್ರತಿಯನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. 10,902 ಕಾವ್ಯಗಳನ್ನು ಒಳಗೊಂಡಿರುವ ರಾಮಾಯಣದ ಪ್ರತಿ ಪುಟವು 24 ಕ್ಯಾರೆಟ್ ಚಿನ್ನದಿಂದ ಲೇಪಿತವಾಗಿದೆ. ಈ ಚಿನ್ನದ ಪ್ರತಿಕೃತಿಯು ಸರಿಸುಮಾರು 480-500 ಪುಟಗಳನ್ನು ಒಳಗೊಂಡಿದೆ. ಇದನ್ನು ತಯಾರಿಸಲು 140 ಕೆಜಿಯಷ್ಟು ತಾಮ್ರವನ್ನು ಸಹ ಬಳಸಲಾಗಿದೆ.































































