ಮೆಡಿಕಲ್‌ ಕಾಲೇಜಿನ 40 ವಿದ್ಯಾರ್ಥಿನಿಯರು ಅಸ್ವಸ್ಥ

ಬೆಂಗಳೂರು: ಕಲಾಸಿಪಾಳ್ಯದಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಬಾಲಕಿಯರ ಹಾಸ್ಟೆಲ್‌ನ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶುಕ್ರವಾರ ಅತಿಸಾರದಿಂದ ಬಳಲಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
28 ವಿದ್ಯಾರ್ಥಿಗಳು ಟ್ರಾಮಾ ಕೇರ್ ಸೆಂಟರ್, 13 ಎಚ್ ಬ್ಲಾಕ್ ಮತ್ತು ಮೂವರು ಐಸಿಯುನಲ್ಲಿದ್ದಾರೆ ಎಂದು ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ಹೇಳಿದ್ದಾರೆ. ಎಲ್ಲರೂ ಬೇಧಿ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿವೆ. ತಪಾಸಣೆಗೆ ಮಾದರಿಗಳನ್ನು ಕಳುಹಿಸಲಾಗಿದೆ ಮತ್ತು ದ್ರವಗಳ ರೂಪದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ತೀವ್ರ ನೀರಿನ ಕೊರತೆಯ ನಡುವೆ ಬೆಂಗಳೂರಿನಲ್ಲಿ ಅಪಾಯವನ್ನುಂಟುಮಾಡುವ ಫುಡ್ ಪಾಯಿಸನ್ ಅಥವಾ ಕಾಲರಾ ಪ್ರಕರಣಗಳಿಗೆ ಸಂಬಂಧಿಸಿವೆಯೇ ಎಂದು ವೈದ್ಯರು ಇನ್ನೂ ಖಚಿತಪಡಿಸಬೇಕಿದೆ. ನೀರಿನ ಸಮಸ್ಯೆ, ವಿಪರೀತ ಬಿಸಿಲಿನ ನಡುವೆ ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮಲ್ಲೇಶ್ವರಂ ಭಾಗದಲ್ಲಿ ಕಾಲರಾ ಪ್ರಕರಣ ದೃಢಪಟ್ಟಿದೆ. ಅದೇ ಪ್ರದೇಶದಲ್ಲಿ ಇನ್ನೂ ಎರಡು ಶಂಕಿತ ಪ್ರಕರಣಗಳನ್ನು ಮಾದರಿಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.









































































































error: Content is protected !!
Scroll to Top