ಶಿವಮೊಗ್ಗದ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಶಕ್ಕೆ ಪಡೆದದ್ದು ಈ ಕಾರಣಕ್ಕೆ

ಶಿವಮೊಗ್ಗ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್​ಐಎ ತೀರ್ಥಹಳ್ಳಿಯ ಬಿಜೆಪಿ ‌ಮುಖಂಡ ಸಾಯಿಪ್ರಸಾದ್‌ ಎಂಬವರನ್ನು ವಶಕ್ಕೆ ಪಡೆದದ್ದು ಚುನಾವಣೆ ಸಮಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಮೇಲೆ ಕಾಂಗ್ರೆಸ್‌ ವಾಗ್ದಾಳಿ ಪ್ರಾರಂಭಿಸಿತ್ತು. ಆದರೆ ಎನ್‌ಐಎ ಸಾಯಿಪ್ರಸಾದ್‌ ಅವರನ್ನು ಇದೀಗ ಬಿಟ್ಟು ಕಳುಹಿಸಿದೆ. ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿರುವ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಮತಿನ್​ ಎಂಬ ಶಂಕಿತ ಉಗ್ರ ಸಿಮ್ ಖರೀದಿಸಿ ಕೊಟ್ಟ ವಿಳಾಸ, ದಾಖಲೆ ದುರುಪಯೋಗ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಸಾಯಿಪ್ರಸಾದ್‌ ​ನನ್ನು ವಿಚಾರಣೆ ಮಾಡಲಾಗಿದ್ದು, ಸತ್ಯಾಂಶ ಗೊತ್ತಾದ ನಂತರ ನಿನ್ನೆ ಎನ್​ಐಎ ತಂಡ ವಾಪಸ್ ಕಳುಹಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇಸ್​ನಲ್ಲಿ ಬಿಜೆಪಿ ಕಾರ್ಯಕರ್ತರ ಭಾಗಿ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ತೀರ್ಥಹಳ್ಳಿಯ ಮೊಬೈಲ್ ಅಂಗಡಿಯಲ್ಲಿ ಸಿಮ್ ಖರೀದಿಸಿ 8 ಹಿಂದುಗಳ ಹೆಸರಿನಲ್ಲಿ ಮತಿನ್ ನಕಲಿ ಫೇಸ್​ಬುಕ್ ಅಕೌಂಟ್ ಮಾಡಿದ್ದಾನೆ. ಇವರನ್ನು ಎನ್‌ಐಎ ತಂಡ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ. ಬಿಜೆಪಿ ಕಾರ್ಯಕರ್ತ ರಾಷ್ಟ್ರವಿರೋಧಿ ಕೃತ್ಯದಲ್ಲಿ ಭಾಗಿ ಆಗಲ್ಲ ಎಂದು ಹೇಳಿದ್ದಾರೆ.
ಸಾಯಿಪ್ರಸಾದ್ ಒಬ್ಬ ಕಾರ್ಯಕರ್ತ. ಉತ್ತಮ ಜೀವನ ಆತ ನಡೆಸುತ್ತಿದ್ದಾನೆ. ಆತ ಓರ್ವ ಪೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆತ ವಿಚಾರಣೆಯಲ್ಲಿ ಸಹಕರಿಸಿ ಸತ್ಯ ಸಂಗತಿ ಹೇಳಿದ್ದಾರೆ. ದಯವಿಟ್ಟು ಅಪಾರ್ಥ ಕಲ್ಪಿಸುವ ಪ್ರಚಾರ ಬೇಡವೆಂದು ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.









































































































error: Content is protected !!
Scroll to Top